ಹೊಸದಿಗಂತ ಡಿಜಿಟಲ್ ಡೆಸ್ಕ್ :
ಫ್ರಾನ್ಸ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಫ್ರಾನ್ಸ್ ಪ್ರಧಾನಿ ಎಲಿಜಬೆತ್ ಎಲಿಜಬೆತ್ ಬೋರ್ನ್ ಅದ್ದೂರಿ ಸ್ವಾಗತ ನೀಡಿದ್ದು, ಇದರ ಬಳಿಕ ಮೋದಿ ಅವರು, ಭಾರತೀಯ ಸಮುದಾಯದ ಸದಸ್ಯರನ್ನು ಭೇಟಿಯಾದರು. ಇದೇ ವೇಳೆ, ‘ಭಾರತ್ ಮಾತಾ ಕಿ ಜೈ’ ಘೋಷಣೆ ಮುಗಿಲುಮುಟ್ಟಿತು.
ಭಾರತೀಯ ಸಮುದಾಯದವರ ಭೇಟಿ ವೇಳೆ ಮಹಿಳೆಯೊಬ್ಬರು ಪ್ರಧಾನಿ ಮೋದಿ ಅವರಿಗೆ ಹಾಡು ಹಾಡುವ ಮೂಲಕ ಸ್ವಾಗತ ಕೋರಿದರು.
A warm welcome by the Indian diaspora in Paris! Across the world, our diaspora has made a mark for themselves and are admired for their diligence and hardworking nature. pic.twitter.com/NtQCSmpCt3
— Narendra Modi (@narendramodi) July 13, 2023
ಈ ಖುಷಿಯನ್ನು ಹಂಚಿಕೊಂಡ ಪ್ರಧಾನಿ ಮೋದಿ,ಪ್ಯಾರಿಸ್‌ನಲ್ಲಿರುವ ಭಾರತೀಯ ವಲಸಿಗರಿಂದ ಆತ್ಮೀಯ ಸ್ವಾಗತ ದೊರೆಯಿತು. ಪ್ರಪಂಚದಾದ್ಯಂತ, ನಮ್ಮ ಸಮುದಾಯದವರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಶ್ರದ್ಧೆ ಮತ್ತು ಶ್ರಮಶೀಲ ಸ್ವಭಾವಕ್ಕಾಗಿ ಮೆಚ್ಚುಗೆ ಪಡೆದಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.