ಚಂದ್ರಯಾನ-3ಕ್ಕೆ ಕೌಂಟ್‌ಡೌನ್ ಶುರು, ಚಂದಿರನೂರಿಗೆ ನಮ್ಮ ಪಯಣ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಗಗನನೌಕೆ ಉಡಾವಣೆಗೆ ಕೌಂಟ್‌ಡೌನ್ ಶುರುವಾಗಿದೆ.

ISRO's Chandrayaan-3: From launch to landing, a complete guide | Technology  News,The Indian Expressಪೂರ್ವನಿಗಧಿಯಂತೆ ಎಲ್ಲವೂ ನಡೆದರೆ ಇಂದು ಮಧ್ಯಾಹ್ನ 2:35ಕ್ಕೆ ಚಂದ್ರಯಾನ-3ರ ಉಪಗ್ರಹವನ್ನು ಹೊತ್ತ ಎಲ್‌ಎಂವಿ-3ರಾಕೆಟ್ ನಭದತ್ತ ಚಿಮ್ಮಲಿದೆ.

ISRO to launch moon mission Chandrayaan-3 on July 14. Check details |  Latest News India - Hindustan Timesಚಂದ್ರನ ಅಂಗಳದಲ್ಲಿ ವಿಕ್ರಂ ಲ್ಯಾಂಡರ್ ಮತ್ತು ರೋವರ್‌ನ್ನು ಇಳಿಸುವ ಈ ಕಾರ್ಯಾಚರಣೆ ಭಾರತದ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ. ಚಂದ್ರಯಾನ-೩ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಲಾಂಚ್ ವೆಹಿಕಲ್ ಮಾರ್ಕ್-111 ಮೂಲಕ ಉಡಾವಣೆಯಾಗಲಿದೆ.

Chandrayaan-3 mission: When will it begin and when will it end? - The Hindu2019ರಲ್ಲಿ ಚಂದ್ರನ ಅಂಗಳದಲ್ಲಿ ಲ್ಯಾಂಡರ್ ಮತ್ತು ನೌಕೆಯನ್ನು ಇಳಿಸುವ ಚಂದ್ರಯಾನ-2 ಕಾರ್ಯಾಚರಣೆ ಭಾಗಶಃ ಮಾತ್ರ ಯಶಸ್ವಿಯಾಗಿತ್ತು. ಚಂದ್ರನ ಪರಿಭ್ರಮಣ ನೌಕೆಯನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಲಾಗಿತ್ತು. ಆದರೆ ಚಂದ್ರನ ನೆಲ ಇನ್ನೇನು ಮುಟ್ಟಬೇಕು ಎನ್ನುವಾಗ ವಿಕ್ರಮ್ ಲ್ಯಾಂಡರ್ ಸಂಪರ್ಕ ಕಳೆದುಕೊಂಡಿತ್ತು.

Chandrayaan-2: India's 1st space mission being led by women scientists |  India News - Times of Indiaಚಂದ್ರಯಾನ-2ರ ವೈಫಲ್ಯಗಳನ್ನು ಗಮನದಲ್ಲಿಟ್ಟುಕೊಂಡು ಚಂದ್ರಯಾನ-3ಯಶಸ್ಸಿಗೆ ಇಸ್ರೋ ಶ್ರಮಿಸಿದೆ. ಚಂದ್ರಯಾನ-3, ಚಂದ್ರಯಾನ-2ರ ಮುಂದುವರಿದ ಭಾಗವಾಗಿದ್ದು, ಚಂದ್ರನ ದಕ್ಷಿಣ ಧ್ರುವದ ಮೇಲೆ ಚಂದ್ರಯಾನ-3 ಗಗನನೌಕೆ ಇಳಿಸಲಾಗುವುದು. ಚಂದ್ರನಲ್ಲಿ ಈಗಾಗಲೇ ಅಮೆರಿಕ, ರಷ್ಯಾ ಮತ್ತು ಚೀನಾ ತನ್ನ ಲ್ಯಾಂಡರ್ ಮತ್ತು ರೋವರ್‌ಗಳನ್ನು ಇಳಿಸಿದೆ. ಈ ಬಾರಿ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್‌ನ್ನು ಇಳಿಸುವಲ್ಲಿ ಮತ್ತು ರೋವರ್‌ನ್ನು ಲ್ಯಾಂಡರ್ ಒಳಗಿಂದ ಹೊರಗೆ ಕಳಿಸುವಲ್ಲಿ ಭಾರತ ಯಶಸ್ವಿಯಾದರೆ ಚಂದ್ರನ ದಕ್ಷಿಣ ಧ್ರುವದಲ್ಲಿ ಕಾರ್ಯಾಚರಣೆ ನಡೆಸಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

Chandrayaan-3 Launch- ISRO Set For Chandrayaan-3 Launch: Goals,  Preparations And Challengesವಿಕ್ರಮ್ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಇಳಿದ ನಂತರ ಲ್ಯಾಂಡರ್ ಹಾಗೂ ರೋವರ್ ನೌಕೆಗಳೆರಡೂ ಒಂದು ದಿನ ಮಾತ್ರ ಚಂದ್ರನಂಗಳದಲ್ಲಿ ಕಾರ್ಯ ನಿರ್ವಹಿಸಲಿವೆ, ಚಂದ್ರನಲ್ಲಿ ಒಂದು ದಿನ, ಭೂಮಿಯಲ್ಲಿ 14 ದಿನಗಳಿಗೆ ಸಮಯವಾಗಿದೆ. ಈ ಅವಧಿಯಲ್ಲಿ ಕಾರ್ಯಾಚರಣೆ ನಡೆಯಲಿದೆ. ಚಂದ್ರಯಾನ-3 ಉಡಾವಣೆಗೆ ವಿಶ್ವವೇ ಎದುರು ನೋಡುತ್ತಿದ್ದು, ಇನ್ನೇನು ಕೆಲವೇ ಸಮಯದಲ್ಲಿ ಉಡಾವಣೆಯಾಗಲಿದೆ.

Water molecules detected on the moon by Chandrayaan-2 orbiter

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!