ಮೇಘನಾ ಶೆಟ್ಟಿ ಶಿವಮೊಗ್ಗ
ಹೆಂಡತಿಗೆ ಅನಿಸಬಹುದು ನನ್ನ ಗಂಡನನ್ನು ನಾನು ಚೆನ್ನಾಗಿ ಅರ್ಥ ಮಾಡ್ಕೊಂಡಿದ್ದೀನಿ, ಅವರ ಪ್ರತೀ ನಡೆ ನನಗೆ ಗೊತ್ತು ಅಂತೆಲ್ಲಾ.. ಆದರೆ ನಿಜವಾಗಿಯೂ ನಿಮಗೆ ನಿಮ್ಮ ಗಂಡನ ಬಗ್ಗೆ ಈ ವಿಷಯಗಳು ಗೊತ್ತಿದ್ಯಾ? ನೋಡ್ಕೊಳ್ಳಿ..
ಅವರು ಗಂಡಸು ಅನ್ನೋದು ನೆನಪಿರಲಿ
ಇದು ಹೇಳಬೇಕಾದ ವಿಷಯ ಅಲ್ಲ, ಲಿಟರಲಿ ಮೀನಿಂಗ್ ತೆಗೆದುಕೊಳ್ಳಬೇಡಿ.. ನಾವು ಹೇಳ್ತಾ ಇರೋದು ನಿಮ್ಮ ಗಂಡ ನಿಮ್ಮ ಜೊತೆ ಹುಡ್ಗೀರ ರೀತಿ ಗಾಸಿಪ್ ಮಾಡ್ಕೊಂಡು, ಭಾವನಾತ್ಮಕವಾಗಿಯೇ ಸದಾ ಮಾತನಾಡ್ಕೊಂಡು ಇರೋದು ಕಷ್ಟ. ಗಂಡಸರಿಗೆ ಇದೆಲ್ಲಾ ದೊಡ್ಡ ವಿಷಯ ಅಲ್ವೇ ಅಲ್ಲ. ಅವರ ಮೆದುಳು ಇದಕ್ಕಾಗಿ ಡಿಸೈನ್ ಆಗಿಲ್ಲ ನೆನೆಪಿಡಿ.
ಗೌರವದ ಬಗ್ಗೆ ತಿಳ್ಕೋಳ್ಳಿ
ನಿಮ್ಮಿಬ್ಬರ ಮಧ್ಯೆ ಪರಸ್ಪರ ಗೌರವ ಇದ್ರೆ ನಿಮ್ಮ ಸಂಬಂಧ ನೂರು ಕಾಲ ಚೆನ್ನಾಗಿರೋದ್ರಲ್ಲಿ ಅನುಮಾನ ಇಲ್ಲ. ಪ್ರೀತಿ ಸ್ವಲ್ಪ ಕಡಿಮೆಯಾದ್ರೂ ಪರವಾಗಿಲ್ಲ ಗಂಡಸರಿಗೆ ಗೌರವ ಬೇಕು. ಹೆಣ್ಣುಮಕ್ಕಳಿಗೆ ಪ್ರೀತಿ ಜೊತೆ ಗೌರವ ಬೇಕು, ಗಂಡಸರಿಗೆ ಗೌರವದ ಜೊತೆ ಪ್ರೀತಿ ಇದ್ರೆ ಸಾಕು.
ಯಶಸ್ಸು ಬೇಕು
ಅವರಿಗೆ ಜೀವನದಲ್ಲಿ ಸದಾ ಮುನ್ನುಗ್ಗುವ ಬಯಕೆ, ಕೆಲಸದಲ್ಲಿ ಯಶಸ್ಸು ಬೇಕು, ಕಾಂಪಿಟೇಷನ್ ಬೇಕು. ಕೆಲಸದಲ್ಲಿ ಡಲ್ ಆದರೆ ಅಥವಾ ಬ್ಯುಸಿನೆಸ್‌ನಲ್ಲಿ ಲಾಸ್ ಆದರೆ ಅದರ ಸಿಟ್ಟು ಕೋಪ ಹತಾಶೆಯನ್ನು ಮನೆಯವರ ಮೇಲೆ ತೋರಿಸ್ತಾರೆ.
ಟೈಮ್ ಕೊಡಿ
ಟಿವಿ ಆನ್‌ನಲ್ಲಿದೆ, ಕೈಯಲ್ಲಿ ಮೊಬೈಲ್ ಇದೆ, ರೀ ಕಾಫಿ ಇಟ್ಟಿದ್ದೀನಿ ಎಂದು ನೀವು ಹೇಳಿದ್ರೂ ನೋ ರಿಯಾಕ್ಷನ್ ಯಾವುದೋ ಯೋಚನೆಯಲ್ಲಿ ಮುಳುಗಿರ‍್ತಾರೆ. ಅವರು ಕೆಲವೊಮ್ಮೆ ಬ್ಲಾಂಕ್ ಆಗಿರ‍್ತಾರೆ, ಅವರಿಗೆ ಯಾವ ವಿಷಯದ ಬಗ್ಗೆ ಏನು ಮಾಡ್ಬೇಕೋ ತಿಳಿತಾ ಇರೋದಿಲ್ಲ. ಈ ಸಮಯ ನಾನು ಮಾತನಾಡಿದ್ದಕ್ಕೆ ನೀನು ಉತ್ತರಿಸಿಲ್ಲ ಎಂದು ಸಿಟ್ಟಾಗಬೇಡಿ, ಅವರನ್ನು ಅವರ ಪಾಡಿಗೆ ಬಿಟ್ಟುಬಿಡಿ.
ನಿನ್ನ ಕನಸುಗಳೇನು?
ಅವರನ್ನು ಚೆನ್ನಾಗಿ ಅರ್ಥಮಾಡಿಕೊಳ್ಳೋಕೆ ಮೊದಲು ಅವರ ಕನಸುಗಳನ್ನು ಅರ್ಥ ಮಾಡಿಕೊಳ್ಳಿ. ಆ ಕನಸಿನೆಡೆಗೆ ಅವರು ಪಯಣ ಬೆಳೆಸುವಾಗ ಏನೆಲ್ಲಾ ಮಾಡ್ತಾರೆ ನಿಮಗೆ ಅರ್ಥ ಆಗುತ್ತಾ ಹೋಗುತ್ತದೆ. ಅವರನ್ನು ಹೀಗೆ ಅರ್ಥ ಮಾಡಿಕೊಳ್ಳೋದು ಸುಲಭ.
ರಾಜನಂತೆ ನೋಡಿಕೊಳ್ಳಿ, ದೇವರಂತೆ ಬಯಸಬೇಡಿ
ನಿಮ್ಮ ಪತಿಯನ್ನು ದೇವರಂತೆ ನೋಡಿಕೊಳ್ಳಿ ಎಂದು ಎಲ್ಲರೂ ಹೇಳ್ತಾರೆ, ಕೇಳಿದ್ದನ್ನೆಲ್ಲಾ ಕೊಡೋದು, ಹೇಳಿದ್ದನ್ನೆಲ್ಲಾ ಕೇಳಿಸಿಕೊಳ್ಳೋದು ದೇವರು ಮಾಡ್ತಾರೆ ಆದರೆ ಗಂಡಂದಿರು ಮಾಡೋಕೆ ಸಾಧ್ಯವಾ? ನಿಮ್ಮನ್ನು ಮಾನಸಿಕ ಆಗು ಹೋಗುಗಳಿಗೆ ಅವರು ಸ್ಪಂದಿಸಿಲ್ಲ ಎಂದ ತಕ್ಷಣ ಅವರ ಮೇಲೆ ನಿಮಗೆ ಗೌರವ ಕಡಿಮೆ ಆಗುತ್ತದೆ. ಹಾಗಾಗಿ ಅವರನ್ನು ಗೌರವದಿಂದ ನೋಡಿ ಆದರೆ ದೇವರಂತಲ್ಲ.
ನಿಮ್ಮ ರೀತಿ ಅವರು ಮಲ್ಟಿ ಟಾಸ್ಕಿಂಗ್ ಅಲ್ಲ
ನೀವು ಒಂದೇ ಸಮಯಕ್ಕೆ ಅಡುಗೆಗೆ ಇಡ್ತೀರಿ, ಹಾಗೇ ಪಾತ್ರೆ ತೊಳೀತಿರಿ, ರೂಂಗೆ ಹೋಗಿ ಬಟ್ಟೆ ಬದಲಾಯಿಸ್ತೀರಿ, ಮಕ್ಕಳ ಬಾಕ್ಸ್‌ಗೆ ಊಟ ಹಾಕುತ್ತೀರಿ ಇದೆಲ್ಲವನ್ನೂ ಒಂದೇ ಸಮಯದಲ್ಲಿ ಮಾಡಿಬಿಡ್ತೀರಿ. ಆದರೆ ಗಂಡಸರಿಗೆ ಮಲ್ಟಿ ಟಾಸ್ಕಿಂಗ್ ಕಷ್ಟ. ಅವರು ಒಂದೇ ಗುರಿ ಇಟ್ಕೋತಾರೆ ಅದನ್ನು ಸಾಧಿಸ್ತಾರೆ. ಈ ಹಿಂದೆ ಗಂಡಸರು ಪ್ರಾಣಿಗಳನ್ನು ಬೇಟೆಯಾಡೋರು ಯಾಕಂದ್ರೆ ಅದೊಂದರ ಮೇಲೆ ನಿಖರವಾಗಿ ಗುರಿ ಇಡೋದು ಅವರಿಗೆ ಸುಲಭ.
ನಿಮ್ಮ ಡಯಟ್ ಅವರಿಗೆ ಇಷ್ಟ ಇಲ್ಲ
ನೀವು ಡಯಟ್ ಫುಡ್ ತಿನ್ನಿ ಆದರೆ ಗಂಡಸರಿಗೆ ಟೇಸ್ಟಿಯಾದ ಅಡುಗೆ ಇಷ್ಟ. ಎಷ್ಟು ತಿಂದರೂ ಅವರಿಗೆ ಹೊಟ್ಟೆ ತುಂಬೋದಿಲ್ಲ. ನಿಮಗಿಂತ ಅವರಿಗೆ ಹೆಚ್ಚು ಆಹಾರ ಬೇಕು.