ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಆಷಾಢ ಮಾಸದ ಕಡೆಯ ಶುಕ್ರವಾರ, ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಚಾಮುಂಡಿತಾಯಿ ದರುಶನಕ್ಕೆ ಭಕ್ತರು ಸರತಿ ಸಾಲಿನಲ್ಲಿ ನಿಂತಿದ್ದಾರೆ.
ಪ್ರತಿದಿನವೂ ಚಾಮುಂಡಿ ತಾಯಿ ದರುಶನಕ್ಕೆ ಸಾಕಷ್ಟು ಮಂದಿ ಆಗಮಿಸುತ್ತಾರೆ ಆದರೆ ವಿಶೇಷ ದಿನಗಳಲ್ಲಿ ಜನರ ಸಂಖ್ಯೆ ಹೆಚ್ಚಾಗುತ್ತದೆ. ಆಷಾಢ ಮಾಸದ ಮೊದಲ ದಿನದಿಂದಲೂ ಭಕ್ತರು ಆಗಮಿಸುತ್ತಿದ್ದು, ಬೆಳಗ್ಗೆ 5:30ರಿಂದಲೇ ದೇವಿ ದರುಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಇಂದು ಕಡೆಯ ಶುಕ್ರವಾರವಾದ ಕಾರಣ ಹೆಚ್ಚು ಭಕ್ತರು ಆಗಮಿಸಿದ್ದು, ನೂಕು ನುಗ್ಗಲು ಏರ್ಪಾಡಾಗಿದೆ. ವಿಶೇಷ ದರುಶನಕ್ಕೆ 300 ರೂಪಾಯಿ ಟಿಕೆಟ್ ಪಡೆಯಲಾಗುತ್ತಿದೆ. ಹಿರಿಯ ನಾಗರಿಕರು 50 ರೂಪಾಯಿ ನೀಡಿ ವಿಶೇಷ ಟಿಕೆಟ್ ಖರೀದಿ ಮಾಡಬಹುದಾಗಿದೆ.