ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಭಾರತದಲ್ಲಿ ಭಾರೀ ಮಳೆಯಾಗುತ್ತಿದ್ದು, ದೆಹಲಿಯಲ್ಲಿ ಪ್ರವಾಹ ಭೀತಿ ಎದುರಾಗಿದೆ.
ಹಲವಾರು ಪ್ರದೇಶಗಳು ಈಗಾಗಲೇ ಜಲಾವೃತವಾಗಿದ್ದು, ನಿನ್ನೆಯಷ್ಟೇ ಐತಿಹಾಸಿಕ ಕೆಂಪುಕೋಟೆಗೂ ನೀರು ನುಗ್ಗಿತ್ತು. ಇದೀಗ ನಗರದ ಮಧ್ಯಭಾಗದಲ್ಲಿರುವ ಸುಪ್ರೀಂ ಕೋರ್ಟ್‌ವರೆಗೂ ನೀರು ಬಂದಿದೆ.
ಇದೀಗ ಮಳೆಯ ಅಬ್ಬರ ಕೊಂಚ ತಗ್ಗಿದ್ದು, ಇನ್ನು 24 ಗಂಟೆಗಳಲ್ಲಿ ಯಮುನೆಯ ನೀರಿನ ಮಟ್ಟವೂ ಸ್ವಲ್ಪ ಕಡಿಮೆಯಾಗಲಿದೆ.