CHANDRAYAAN -3| ಚಂದ್ರಯಾನ-3 ನೌಕೆ ನಿಗದಿತ ಕಕ್ಷೆ ಸೇರುವಲ್ಲಿ ಯಶಸ್ವಿಯಾಗಿದೆ: ಇಸ್ರೋ ಅಧ್ಯಕ್ಷ ಸೋಮನಾಥ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಇಸ್ರೋದಿಂದ (ISRO) ಐತಿಹಾಸಿಕ ಚಂದ್ರಯಾನ-3 ಉಡಾವಣೆ ಯಶಸ್ವಿಯಾಗಿದೆ ಎಂದು ಶ್ರೀಹರಿಕೋಟಾದ ಸತೀಶ್ ಧವನ್​ ಬಾಹ್ಯಾಕೇಂದ್ರದಲ್ಲಿ ಮಾತನಾಡಿದ ಇಸ್ರೋ ಅಧ್ಯಕ್ಷ ಸೋಮನಾಥ್ ​ ಹೇಳಿದ್ದಾರೆ. ರಾಕೆಟ್ ಚಂದ್ರಯಾನ 3 ಅನ್ನು ನಿಖರ ಕಕ್ಷೆಗೆ ಸೇರಿಸಿದೆ ಎಂದು ಅವರು ಹೇಳಿದ್ದಾರೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರನ ಅಂಗಳಕ್ಕೆ ಇಳಿಯುವ ಚಂದ್ರಯಾನ-3 ಅನ್ನು ಶುಕ್ರವಾರಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಲಾಂಚ್ ವೆಹಿಕಲ್ ಮಾರ್ಕ್-3 ರಾಕೆಟ್‌ನಲ್ಲಿ ಉಡಾವಣೆ ಮಾಡಿದೆ.

ಚಂದ್ರಯಾನ-2 ವಿಫಲವಾಗಿ ನಾಲ್ಕು ವರ್ಷಗಳ ನಂತರ ಚಂದ್ರಯಾನ-3 ಮಿಷನ್ ಯಶಸ್ವಿಯಾಗಿ ಉಡಾವಣೆ ಆಗಿದೆ. ಚಂದ್ರನ ಕಕ್ಷೆಯನ್ನು ತಲುಪುವುದು, ಲ್ಯಾಂಡರ್ ಅನ್ನು ಬಳಸಿಕೊಂಡು ಚಂದ್ರನ ಮೇಲ್ಮೈಯಲ್ಲಿ ಮೃದುವಾದ-ಲ್ಯಾಂಡಿಂಗ್ ಮಾಡುವುದು ಮತ್ತು ಚಂದ್ರನ ಮೇಲ್ಮೈಯನ್ನು ಅಧ್ಯಯನ ಮಾಡಲು ಲ್ಯಾಂಡರ್‌ನಿಂದ ಹೊರಬರುವ ರೋವರ್ ಸೇರಿದಂತೆ ವಿವಿಧ ಸಾಮರ್ಥ್ಯಗಳನ್ನು ಪ್ರದರ್ಶಿಸುವ ಗುರಿಯನ್ನು ಇದು ಹೊಂದಿದೆ

ನಭಕ್ಕೆ ಚಿಮ್ಮಿದ ಹದಿನಾರು ನಿಮಿಷಗಳ ನಂತರ, ಪ್ರೊಪಲ್ಷನ್ ಮಾಡ್ಯೂಲ್ ರಾಕೆಟ್‌ನಿಂದ ಯಶಸ್ವಿಯಾಗಿ ಬೇರ್ಪಟ್ಟಿತು. ಇದು ಭೂಮಿಯಿಂದ 170 ಕಿಮೀ ಹತ್ತಿರ ಮತ್ತು 36,500 ಕಿಮೀ ದೂರದಲ್ಲಿ ಚಂದ್ರನ ಕಕ್ಷೆಯ ಕಡೆಗೆ ಚಲಿಸುವ ದೀರ್ಘವೃತ್ತದ ಚಕ್ರದಲ್ಲಿ ಸುಮಾರು 5-6 ಬಾರಿ ಭೂಮಿಯನ್ನು ಸುತ್ತುತ್ತದೆ.

ಚಂದ್ರಯಾನ-3 ಚಂದ್ರನ ಕಡೆಗೆ ತನ್ನ ಪ್ರಯಾಣವನ್ನು ಪ್ರಾರಂಭಿಸಿದೆ. ಈಗಾಗಲೇ ಚಂದ್ರಯಾನ-3 ನೌಕೆಯನ್ನು ಭೂಮಿಯ ಸುತ್ತಲೂ ನಿಖರವಾಗಿ ಇರಿಸಿದೆ. ಚಂದ್ರಯಾನ-3 ತನ್ನ ದೂರದ ಕಕ್ಷೆಯನ್ನು ಹೆಚ್ಚಿಸುವ ಕುಶಲತೆ ಮಾಡಲು ನಾವು ಎಲ್ಲರಿಗೂ ಶುಭ ಹಾರೈಸೋಣ ಎಂದು ಇಸ್ರೋ ಅಧ್ಯಕ್ಷರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!