ಹೊಸ ದಿಗಂತ ವರದಿ, ಬಳ್ಳಾರಿ:
ಭಾರತ ದೇಶದ ನಮ್ಮೆಲ್ಲರ ಹೆಮ್ಮೆಯ ವೈಜ್ಞಾನಿಕ ಸಂಸ್ಥೆಯಾದ ಇಸ್ರೋ ಚಂದ್ರಯಾನದ ಪ್ರಯೋಗವನ್ನು ಮಾಡುತ್ತಿದ್ದು, ಈ ಪ್ರಯೋಗ ಅತ್ಯಂತ ಯಶಸ್ವಿಯಾಗಲಿ ಎಂದು ಶ್ರೀಮದುತ್ತರಾಧಿಮಠದ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಅವರು ಪ್ರಾರ್ಥಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿದ ಅವರು, ಇಸ್ರೋ ಸಂಸ್ಥೆಯ ಈ ಚಂದ್ರಯಾನದ ಪ್ರಯೊಗ ಭಾರತೀಯರಾದ ನಮ್ಮೆಲ್ಲರಿಗೂ ಅತ್ಯಂತ ಸಂತೋಷ, ಅಭಿಮಾನದ ಸಂಗತಿಯಾಗಿದೆ. ನಮ್ಮ ಉಪಾಸ್ಯ ಮೂರ್ತಿಗಳಾದ ಶ್ರೀಮನ್ಮೂಲರಾಮ ದಿಗ್ವಿಜಯರಾಮ ವೇದವ್ಯಾಸರಲ್ಲಿ, ಈ ಕಾರ್ಯಕ್ಕೆ ಯಶಸ್ಸು ಸಿಗಲಿ ಎಂದು ಸಕಲ ಗ್ರಹ ನಕ್ಷತ್ರಾದಿಯ ತೇಜೋಮಯವಾದ ವಸ್ತುಗಳಿಗೆ ಆಶ್ರಯನಾದ ಶುಂಸುಮಾರ ರೂಪಿಯಾದ ಭಗವಂತನಲ್ಲಿ ಭಕ್ತಿಯಿಂದ ಪ್ರಾರ್ಥನೆ ಮಾಡ್ತೇವೆ, ಭಕ್ತರಾದ ತಾವೆಲ್ಲ ಆ ಭಗವಂತನಿಗೆ ಈ ಕಾರ್ಯಕ್ಕೆ ಯಶಸ್ವಿಯಾಗಲಿ ಎಂದು ಪ್ರಾರ್ಥನೆ ಮಾಡಿ,ಇಂತಹ ಶ್ರೇಷ್ಠವಾದ ಸಾಧನೆ ಮಾಡಲು ಹೊರಟ ನಮ್ಮ ನಿಮ್ಮೆಲ್ಲರ ಹೆಮ್ಮೆಯ ಇಸ್ರೋ ಸಂಸ್ಥೆಯ ಎಲ್ಲ ವಿಜ್ಞಾನಿಗಳ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸುವೆ.
ಇಸ್ರೋ ಸಂಸ್ಥೆಯ ತಂಡದವರು ಇನ್ನೂ ಇಂತಹ ದೊಡ್ಡ ದೊಡ್ಡ ಕಾರ್ಯಗಳನ್ನು ಮಾಡಿ, ನಮ್ಮ ಹೆಮ್ಮೆಯ ಭಾರತ ದೇಶದ ಕಿರ್ತಿಯ ಪತಾಕೆಯನ್ನು ವಿಶ್ವದ ತುಂಬೆಲ್ಲಾ ಹಾರಾಡಿಸುವ ದೊಡ್ಡ ಶಕ್ತಿಯನ್ನು ದೇವರು ನೀಡಲಿ ಎಂದು ಭಕ್ತಿಯಿಂದ ಪ್ರಾರ್ಥಸುವೆ. ಈ ಒಂದು ಕಾರ್ಯದ ವಿಶೇಷವಾದ ಸಾಧನೆಯ ಪ್ರೋತ್ಸಾಹವನ್ನು ನೀಡುವ ನಮ್ಮ ಘನ ಸರ್ಕಾರಕ್ಕೆ ಅಭಿನಂದನೆಗಳನ್ನು ತಿಳಿಸುವೆ ಎಂದಿದ್ದಾರೆ.