ಮ್ಯಾಕ್ರನ್‌ ದಂಪತಿಗೆ ಶ್ರೀಗಂಧದ ಸಿತಾರ್‌, ಪೋಚಂಪಲ್ಲಿ ಇಕಾತ್ ಸೀರೆ ಗಿಫ್ಟ್‌ ಕೊಟ್ಟ ಪ್ರಧಾನಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ದಂಪತಿಗೆ ಪೋಚಂಪಲ್ಲಿ ಇಕತ್ ಸೀರೆ ಮತ್ತು ಶ್ರೀಗಂಧದ ಸಿತಾರ್ ಅನ್ನು ಉಡುಗೊರೆಯಾಗಿ ನೀಡಿದರು. ಸಿತಾರ್‌- ಸಂಗೀತ ವಾದ್ಯದ ವಿಶಿಷ್ಟ ಪ್ರತಿಕೃತಿಯನ್ನು ಶುದ್ಧ ಶ್ರೀಗಂಧದಿಂದ ಮಾಡಲಾಗಿದೆ. ತಮ್ಮ ಎರಡು ದಿನಗಳ ಭೇಟಿಯ ಸಂದರ್ಭದಲ್ಲಿ, ಫ್ರೆಂಚ್ ರಾಷ್ಟ್ರೀಯ ದಿನಾಚರಣೆಯಲ್ಲಿ ಭಾಗವಹಿಸಿದ ಮೋದಿ, ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ಅವರೊಂದಿಗೆ ಉಡುಗೊರೆಗಳನ್ನು ಈ ಸಂದರ್ಭದಲ್ಲಿ ವಿನಿಮಯ ಮಾಡಿಕೊಂಡರು.

ಹಾಗೆಯೇ ಫ್ರೆಂಚ್ ರಾಷ್ಟ್ರೀಯ ಅಸೆಂಬ್ಲಿಯ ಅಧ್ಯಕ್ಷ ಯೇಲ್ ಬ್ರೌನ್-ಪಿವೆಟ್ ಅವರಿಗೆ ಕೈಯಿಂದ ಹಣೆದ ಹಾಕಿದ ಸಿಲ್ಕ್ ಕಾಶ್ಮೀರಿ ಕಾರ್ಪೆಟ್ ಅನ್ನು ನೀಡಲಾಯಿತು. ಫ್ರೆಂಚ್ ಸೆನೆಟ್ ಅಧ್ಯಕ್ಷ ಗೆರಾರ್ಡ್ ಲಾರ್ಚರ್ ಅವರಿಗೆ ಶ್ರೀಗಂಧದ ಆನೆ ಅಂಬಾರಿಯನ್ನು ಮೋದಿ ಉಡುಗೊರೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಸರಸ್ವತಿ ಮೂರ್ತಿಗಳನ್ನು ಮ್ಯಾಕ್ರನ್‌ಗೆ ಉಡುಗೊರೆಯಾಗಿ ನೀಡಲಾಯಿತು.

ಪ್ರಧಾನಿ ಮೋದಿ ಅವರು ಫ್ರೆಂಚ್ ಪ್ರಥಮ ಮಹಿಳೆಗೆ ಶ್ರೀಗಂಧದ ಪೆಟ್ಟಿಗೆಯಲ್ಲಿ ಪೋಚಂಪಲ್ಲಿ ರೇಷ್ಮೆ ಇಕತ್ ಸೀರೆಯನ್ನು ಉಡುಗೊರೆಯಾಗಿ ನೀಡಿದರು. ಈ ಸೀರೆ ಭಾರತದ ಸೌಂದರ್ಯ, ಕರಕುಶಲತೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಅನಾವರಣಗೊಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!