ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಎಂಟಿಸಿ ವಿದ್ಯಾರ್ಥಿಗಳ ಬಸ್ ಪಾಸ್ ಅವಧಿ ಜುಲೈ 31 ರವರೆಗೆ ವಿಸ್ತರಣೆ ಮಾಡಿದೆ.
ಹೀಗಾಗಿ ಜುಲೈ 31 ರ ವರೆಗೆ ವಿದ್ಯಾರ್ಥಿಗಳು ಹೊಸ ಪಾಸ್ಗಳನ್ನು ಪಡೆಯಬಹುದು ಎಂದು ಬೆಂಗಳೂರು ಮಹಾನಗರ ಸಾರಿಗೆ ಮಾಹಿತಿ ನೀಡಿದೆ. ಜೊತೆಗೆ ಈಗಿರುವ ಕಳೆದ ವರ್ಷ ನೀಡಲಾದ ವಿಬಸ್ ಪಾಸ್ಗಳ ಮಾನ್ಯತೆಯನ್ನು ಜುಲೈ 31 ರ ವರೆಗೆ ವಿಸ್ತರಿಸಿ ಬಿಎಂಟಿಸಿ ಆದೇಶ ಹೊರಡಿಸಿದೆ.
ಇದೇ ವೇಳೆ ಹೊಸ ಬಸ್ ಪಾಸ್ ಅವಧಿಗೆ ಅರ್ಜಿ ಸಲ್ಲಿಕೆ ಕೂಡ ಆರಂಭವಾಗಿದ್ದು, ಜುಲೈ 7ರಿಂದ ಹೊಸ ಬಸ್ ಪಾಸ್ ಕೂಡ ವಿತರಿಸಲಾಗುತ್ತಿದೆ. ವಿದ್ಯಾರ್ಥಿಗಳು ಪ್ರಸಕ್ತ ವರ್ಷದ ಶಾಲಾ-ಕಾಲೇಜುಗಳ ಶುಲ್ಕ ಪಾವತಿ ರಶೀದಿ ಅಥವಾ ಶಾಲಾ-ಕಾಲೇಜು ಗುರುತಿನ ಚೀಟಿ ಪ್ರಸ್ತುತಪಡಿಸಿ ಪಡೆಯಬಹುದು.ವಿದ್ಯಾರ್ಥಿಗಳು ಜುಲೈ 31ರೊಳಗೆ ಹೊಸ ಬಸ್ ಗಳಿಗಾಗಿ ಆನ್ ಲೈನ್ ಅಥವಾ ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವಂತೆ ಬಿಎಂಟಿಸಿ ಸೂಚಿಸಿದೆ. ಆನ್ ಲೈನ್ ಅಪ್ಲಿಕೇಶನ್ ಗಳಿಗಾಗಿ ವಿದ್ಯಾರ್ಥಿಗಳು ಸೇವಾಸಿಂಧು ಆಫ್ ಅಥವಾ ಬಿಎಂಟಿಸಿ ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.