ನಟಿ ನಿತ್ಯಾ ಮೆನನ್ ಮನೆಯಲ್ಲಿ ವಿಷಾದ: ʻಮಿಸ್‌ ಯೂ‌ʼ ಎಂದು ಭಾವುಕ ಪೋಸ್ಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಹುಭಾಷಾ ನಟಿ ನಿತ್ಯಾ ಮೆನನ್ ಮನೆಯಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ. ನಿತ್ಯಾ ಸಾಮಾಜಿಕ ಜಾಲತಾಣದಲ್ಲಿ ತನ್ನ ದುಃಖವನ್ನು ವ್ಯಕ್ತಪಡಿಸಿರುವ ಪೋಸ್ಟ್ ಇದೀಗ ವೈರಲ್ ಆಗುತ್ತಿದೆ.

ತುಂಬಾ ಪ್ರೀತಿಸುತ್ತಿದ್ದ ನಿತ್ಯಾ ಅಜ್ಜಿ ನಿಧನರಾಗಿದ್ದು, ಅಜ್ಜ-ಅಜ್ಜಿ ಇಬ್ಬರು ಜೊತೆಗಿಲ್ಲ ಎನ್ನುವುದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ನೋವಿನಿಂದಾಗಿ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಅಜ್ಜಿ ಮತ್ತು ಅಜ್ಜನೊಂದಿಗಿನ ಚಿತ್ರವನ್ನು ಹಂಚಿಕೊಂಡಿದ್ದಾರೆ. “ಯುಗವೊಂದು ಕೊನೆಗೊಂಡಿದೆ. ಗುಡ್ ಬೈ ಅಜ್ಜಿ ಮತ್ತು ನನ್ನ ಚೆರ್ರಿಮನ್. ನಾನು ನಿಮ್ಮನ್ನು ಬೇರೊಂದು ಜಗತ್ತಿನಲ್ಲಿ ಭೇಟಿಯಾಗುತ್ತೇನೆ” ಎಂದು ಅವರು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ನೋಡಿದ ನೆಟ್ಟಿಗರು ಆಕೆಯ ಧೈರ್ಯದ ಬಗ್ಗೆ ಕಮೆಂಟ್ ಮಾಡುತ್ತಿದ್ದಾರೆ.

ಇನ್ನು ನಿತ್ಯಾ ಮೆನನ್ ಸಿನಿಮಾಗಳ ವಿಚಾರಕ್ಕೆ ಬಂದರೆ ಸದ್ಯ ಮಲಯಾಳಂನಲ್ಲಿ ಒಂದು ಸಿನಿಮಾ ಹಾಗೂ ತಮಿಳಿನಲ್ಲಿ ಇನ್ನೊಂದು ಸಿನಿಮಾ ಮಾಡುತ್ತಿದ್ದಾರೆ. ಸಿನಿಮಾಗಳ ಜೊತೆಗೆ ಹಲವು ವೆಬ್ ಸೀರಿಸ್ ಗಳಲ್ಲೂ ನಟಿಸುತ್ತಿದ್ದಾರೆ. ಈ ಕ್ರಮದಲ್ಲಿ ಎರಡು ವೆಬ್ ಸಿರೀಸ್ ತಯಾರಾಗಲಿದೆ. ಅಲ್ಲದೆ, ಅವರು ತೆಲುಗು OTT ಪ್ಲಾಟ್‌ಫಾರ್ಮ್ ಆಹಾದಲ್ಲಿ ಪ್ರಸಾರವಾಗುವ ತೆಲುಗು ಇಂಡಿಯನ್ ಐಡಲ್‌ನಲ್ಲಿ ತೀರ್ಪುಗಾರರಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!