ಶಾಂತಳಾದ ಯುಮನೆ: ಶೀಘ್ರದಲ್ಲೇ ಯಥಾಸ್ಥಿತಿಯತ್ತ ದೆಹಲಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಯಮುನಾ ನದಿಯ ನೀರಿನ ಮಟ್ಟ ಕಡಿಮೆಯಾಗಿದ್ದು, ರಾತ್ರಿ 11 ಗಂಟೆಗೆ ನದಿ ನೀರಿನ ಮಟ್ಟ 205.50 ಮೀಟರ್ ದಾಖಲಾಗಿದೆ. ಶೀಘ್ರದಲ್ಲೇ ನದಿ ನೀರಿನ ಮಟ್ಟ ಕಡಿಮೆಯಾಗಿ ದೆಹಲಿ ಯಥಾಸ್ಥಿತಿಗೆ ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಂದಾಯ ಸಚಿವೆ ಅತಿಶಿ ಹೇಳಿದಂತೆ, “ಯಮುನಾ ನದಿಯ ನೀರಿನ ಮಟ್ಟ ವೇಗವಾಗಿ ಕಡಿಮೆಯಾಗುತ್ತಿದೆ ಮತ್ತು ಇಂದು ರಾತ್ರಿಯ ವೇಳೆಗೆ ಅಪಾಯದ ಮಟ್ಟಕ್ಕಿಂತ ಕೆಳಗಿರುತ್ತದೆ ಎಂದು ಅಂದಾಜಿಸಲಾಗಿದೆ” ಎಂದರು. ಈಗ, ನಮ್ಮ ಆದ್ಯತೆ ಜನ ಜೀವನವನ್ನು ಸಹಜ ಸ್ಥಿತಿಗೆ ತರುವುದು ಮತ್ತು ಸ್ಥಳಾಂತರಿಸಿದವರಿಗೆ ಪರಿಹಾರ ಮತ್ತು ಪುನರ್ವಸತಿ ಶಿಬಿರಗಳನ್ನು ಸ್ಥಾಪಿಸುವುದು. ಆದರೆ ನಗರದ ಅನೇಕ ಭಾಗಗಳು ಇನ್ನೂ ಜಲಾವೃತವಾಗಿದೆ, ನಾವು ರಸ್ತೆಗಳಿಂದ ನೀರನ್ನು ಪಂಪ್ ಮಾಡುತ್ತಿದ್ದೇವೆ ಎಂದರು.

ಹತ್ನಿಕುಂಡ್ ಬ್ಯಾರೇಜ್‌ನಿಂದ ನೀರು ಹರಿಯುತ್ತಿರುವುದು ಕಡಿಮೆಯಾದ್ದರಿಂದ ಯಮುನಾ ನದಿ ಪ್ರವಾಹದಲ್ಲಿ ಕೊಂಚ ಇಳಿಕೆ ಕಂಡಿದೆ.
ದೆಹಲಿಯ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ರಕ್ಷಣಾ ಕಾರ್ಯಕ್ಕಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) 17 ತಂಡಗಳನ್ನು ನಿಯೋಜಿಸಿದೆ.

ದೆಹಲಿಯ ಆರು ಜಿಲ್ಲೆಗಳ ಪ್ರವಾಹ ಪೀಡಿತ ತಗ್ಗು ಪ್ರದೇಶಗಳಿಂದ ಸುಮಾರು 26,401 ಜನರನ್ನು ಸ್ಥಳಾಂತರಿಸಲಾಗಿದೆ, ಅವರಲ್ಲಿ ಸುಮಾರು 21,504 ಜನರು 44 ಶಿಬಿರಗಳಲ್ಲಿ ತಂಗಿದ್ದಾರೆ. ತೆರವುಗೊಂಡ ಉಳಿದ ಜನರು ತಮ್ಮ ಸಂಬಂಧಿಕರ ಮನೆಗಳು ಅಥವಾ ಬಾಡಿಗೆ ವಸತಿಗಳಂತಹ ತಮ್ಮ ಆಯ್ಕೆಯ ಸ್ಥಳಗಳಿಗೆ ಸ್ಥಳಾಂತರಗೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!