ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಫಿ, ಟೀ ಮತ್ತು ಸಿಹಿತಿಂಡಿಗಳಿಗೆ ಮಾತ್ರವಲ್ಲದೆ ಸೌಂದರ್ಯವರ್ಧಕವಾಗಿಯೂ ಸಕ್ಕರೆ ಕೆಲಸ ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಹುಡುಗಿಯರು ಸಕ್ಕರೆಯನ್ನು ಸ್ಕ್ರಬ್ ಆಗಿ ಬಳಸುತ್ತಾರೆ. ಇದು ಬಹಳ ಗೊತ್ತಿದ್ದರೂ ಗೊತ್ತಿಲ್ಲದ ವಿಷಯ ಎಂದರೆ ಸಕ್ಕರೆಯನ್ನು ತಲೆಕೂದಲಿಗೆ ಬಲಸುತ್ತಾರೆ ಎಂಬುದು.
ಹೌದು, ಸಕ್ಕರೆಯನ್ನು ನೆತ್ತಿಗೆ ಹಚ್ಚುವುದು ಕೂದಲಿನ ಆರೈಕೆಯ ಭಾಗವಾಗಿದೆ. ಇದು ವಿಚಿತ್ರ ಮತ್ತು ಹೊಸದು ಎನಿಸಿದರೂ ಕೂಡ ಸತ್ಯ. ಹಾಗೆಯೇ ಶಾಂಪೂದಲ್ಲಿ ಸಕ್ಕರೆಯನ್ನು ಸೇರಿಸುವುದರಿಂದ ಆಗುವ ಪ್ರಯೋಜನಗಳನ್ನು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ.
ಈಗ ಮಳೆಗಾಲ ಆರಂಭವಾಗಿದೆ. ಮಳೆಯಲ್ಲಿ ಒದ್ದೆಯಾಗುವುದರಿಂದ ಹಲವರಿಗೆ ತಲೆಹೊಟ್ಟು ಬರುತ್ತದೆ. ತಲೆಹೊಟ್ಟು ಕೂದಲು ಉದುರುವಿಕೆ, ಕೂದಲು ಒಡೆಯುವುದು, ನೆತ್ತಿಯಲ್ಲಿ ತುರಿಕೆ ಮತ್ತು ಹುಣ್ಣುಗಳಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದೆಲ್ಲದನ್ನು ಸ್ವಲ್ಪ ಶಾಂಪೂಗೆ ಒಂದು ಚಮಚ ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣ ತಲೆಗೆ ಹಚ್ಚಿ ಸ್ನಾನ ಮಾಡಿ. ವಾರದಲ್ಲಿ ಎರಡು ಬಾರಿ ಹೀಗೆ ಮಾಡಿದರೆ ಯಾವುದೇ ಮೊಂಡುತನದ ತಲೆಹೊಟ್ಟು ಮಾಯವಾಗುತ್ತದೆ.
ವಾಸ್ತವವಾಗಿ ಸಕ್ಕರೆ ಉತ್ತಮ ಕೂದಲು ಕಂಡೀಷನಿಂಗ್ ಗುಣಗಳನ್ನು ಹೊಂದಿದೆ. ಈ ಗುಣಲಕ್ಷಣಗಳು ನೆತ್ತಿಯಿಂದ ಸಂಗ್ರಹವಾದ ಕೊಳಕು ಮತ್ತು ಸತ್ತ ಜೀವಕೋಶಗಳನ್ನು ಆಳವಾಗಿ ತೆಗೆದುಹಾಕುತ್ತವೆ. ಇದರಿಂದಾಗಿ ತಲೆಹೊಟ್ಟು ಹೋಗಲಾಡಿಸಲು ಇದು ತುಂಬಾ ಸಹಕಾರಿ. ಸಕ್ಕರೆಯ ಕಾರಣದಿಂದಾಗಿ ಇರುವೆಗಳು ನಿಮ್ಮ ಕೂದಲಿನ ಮೇಲೆ ದಾಳಿ ಮಾಡುತ್ತವೆ ಎಂದು ನೀವು ಚಿಂತಿಸಬೇಕಾಗಿಲ್ಲ. ಏಕೆಂದರೆ ಶಾಂಪೂ ಹಾಕಿದ ನಂತರ ಕೂದಲನ್ನು ಶುದ್ಧ ನೀರಿನಿಂದ ತೊಳೆಯುವುದರಿಂದ ಅಂತಹ ಸಮಸ್ಯೆ ಇರುವುದಿಲ್ಲ.