ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲನಟಿ ವಂಶಿಕಾ ಅಂಜನಿ ಕಶ್ಯಪ ಹೆಸರನ್ನು ದುರ್ಬಳಕೆ ಮಾಡಿ ಜನರಿಗೆ ಮೋಸ ಮಾಡಿದ ಪ್ರಕರಣದಲ್ಲಿ ನಿಶಾ ನರಸಪ್ಪ ವಿರುದ್ಧ ಈಗಾಗಲೇ ಅನೇಕ ದೂರುಗಳು ದಾಖಲಾಗಿವೆ.
ಇದೀಗ ಬಾಲಿವುಡ್ ಮಂದಿಯ ಹೆಸರನ್ನೂ ಹೇಳಿಕೊಂಡು ಕೆಲವರು ಮೋಸ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಈ ಕುರಿತು ಖುದ್ದು ನಟ ಸಲ್ಮಾನ್ ಖಾನ್ ಹೇಳಿಕೊಂಡಿದ್ದು, ತನ್ನ ನಿರ್ಮಾಣ ಸಂಸ್ಥೆಯ (Salman Khan Films) ಹೆಸರು ಬಳಸಿಕೊಂಡು ಯಾರೋ ಕಿಡಿಗೇಡಿಗಳು ಜನರಿಂದ ಹಣ ಕೀಳುವ ಪ್ರಯತ್ನ ಮಾಡಿದ್ದಾರೆ ಎಂದಿದ್ದಾರೆ
ಸಲ್ಮಾನ್ ಖಾನ್ ಅವರ ಒಡೆತನದ ‘ಸಲ್ಮಾನ್ ಖಾನ್ ಫಿಲ್ಮ್ಸ್’ ಕಂಪನಿ ಈ ಕುರಿತು ಹೇಳಿಕೆ ಬಿಡುಗಡೆಗೊಳಿಸಿದ್ದು. ‘ಸಲ್ಮಾನ್ ಖಾನ್ ಅವರಾಗಲಿ, ಸಲ್ಮಾನ್ ಖಾನ್ ಫಿಲ್ಮ್ಸ್ ಕಂಪನಿ ಕಡೆಯಿಂದಾಗಲಿ ಯಾವುದೇ ಕಲಾವಿದರ ಆಯ್ಕೆ ಸದ್ಯಕ್ಕೆ ನಡೆಯುತ್ತಿಲ್ಲ. ನಮ್ಮ ಸಿನಿಮಾಗಳಿಗೆ ಕಲಾವಿದರನ್ನು ಆಯ್ಕೆ ಮಾಡುವ ಸಲುವಾಗಿ ನಾವು ಯಾವುದೇ ಕಾಸ್ಟಿಂಗ್ ಏಜೆನ್ಸಿಯನ್ನು ನೇಮಿಸಿಕೊಂಡಿಲ್ಲ. ಯಾರಿಂದಲಾದರೂ ಈ ಬಗ್ಗೆ ಮೆಸೇಜ್ ಅಥವಾ ಇ-ಮೇಲ್ ಬಂದರೆ ದಯವಿಟ್ಟು ನಂಬಬೇಡಿ. ಸಲ್ಮಾನ್ ಖಾನ್ ಮತ್ತು ಅವರ ಸಂಸ್ಥೆಯ ಹೆಸರನ್ನು ಅನಧಿಕೃತವಾಗಿ ಬಳಸಿಕೊಂಡಿರುವುದು ಕಂಡುಬಂದರೆ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಸ್ಪಷ್ಟನೆ ನೀಡಿದೆ.
Official Notice! pic.twitter.com/uIvAQgYbwl
— Salman Khan (@BeingSalmanKhan) July 17, 2023
ಬಾಲಿವುಡ್ನಲ್ಲಿ ಸಲ್ಮಾನ್ ಖಾನ್ ಅಂದ್ರೆ ಎಲ್ಲರಿಗೂ ತುಂಬಾ ಗೌರವ,ಅವರು ನಟನಾಗಿ, ನಿರ್ಮಾಪಕನಾಗಿ, ಕಿರುತೆರೆ ಕಾರ್ಯಕ್ರಮಗಳ ನಿರೂಪಕನಾಗಿ ಅವರು ಹೆಸರು ಮಾಡಿದ್ದಾರೆ. ಎಷ್ಟೋ ಜನರಿಗೆ ಅವರು ಅವಕಾಶ ನೀಡಿದ್ದಾರೆ. ಹಲವು ಕಲಾವಿದರನ್ನು ಮತ್ತು ತಂತ್ರಜ್ಞರನ್ನು ಬಾಲಿವುಡ್ಗೆ ಪರಿಚಯಿಸಿದ್ದಾರೆ.
ಹೀಗಾಗಿ ಅವರ ಹೆಸರಲ್ಲಿ ಯಾರೋ ಮೋಸ ಮಾಡುತ್ತಿರುವುದು ತಿಳಿದುಬಂದಿದೆ. ಜನರು ಮೋಸ ಹೋಗಬಾರದು ಎಂಬ ಉದ್ದೇಶದಿಂದ ಸಲ್ಲು ಅವರು ಹೇಳಿಕೆ ಬಿಡುಗಡೆ ಮಾಡಿದ್ದಾರೆ.