ಅವರ ಅಸ್ತಿತ್ವವನ್ನೇ ಕಾಪಾಡಲು ಸಾಧ್ಯವಾಗದವರು ಬೆಂಗಳೂರಿನಲ್ಲಿ ಶೋ ಮಾಡುತ್ತಿದ್ದಾರೆ: ಬೊಮ್ಮಾಯಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಬಿಜೆಪಿ ವಿರುದ್ಧ ವಿಪಕ್ಷಗಳ ಮೈತಿ ಬೆಂಗಳೂರಿನಲ್ಲಿ ಸಭೆ ಸೇರಿದ್ದು, ಈ ಕುರಿತು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಂಗವಾಡಿದ್ದಾರೆ‌.

ಅಸ್ತಿತ್ವವೇ ಇಲ್ಲದವರು ಬೆಂಗಳೂರಿನಲ್ಲಿ ಅಸ್ತಿತ್ವಕ್ಕಾಗಿ ಶೋ ಮಾಡುತ್ತಿದ್ದಾರೆ ಎಂದು ಬೊಮ್ಮಾಯಿ ವ್ಯಂಗವಾಡಿದ್ದಾರೆ‌.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರತಿಪಕ್ಷಗಳು ಅವರ ಅಸ್ತಿತ್ವವನ್ನೇ ಅವರು ಕಾಪಾಡಲು ಸಾಧ್ಯವಿಲ್ಲ. ಇಲ್ಲಿ ಬಂದು ಶೋ ಮಾಡೊ ಪ್ರಯತ್ನ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಏನೋ ದೊಡ್ಡ ಸಾಧನೆ ಮಾಡಿದ್ದೇವೆ ಅಂತ ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮಣ್ಣು ಮುಕ್ಕುವುದು ನಿಶ್ಚಿತ ಎಂದು ಹೇಳಿದರು.

ಕರ್ನಾಟಕದಲ್ಲಿ UPA ಅಂಗ ಪಕ್ಷಗಳ ಸಭೆಯಿಂದ ಏನೂ ಪ್ರಯೋಜನವಿಲ್ಲ. ಮೋದಿ ಅವರದು ಮೇರು ವ್ಯಕ್ತಿತ್ವ, ರಾಷ್ಟ್ರದಲ್ಲಿ 9 ವರ್ಷದಲ್ಲಿ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಸೇರಿ ಎಲ್ಲಾ ರಂಗದಲ್ಲೂ ದೊಡ್ಡ ಬದಲಾವಣೆ ತಂದು ದೇಶದವನ್ನು ಅಭಿವೃದ್ಧಿ ಪಥದಲ್ಲಿ ತೆಗೆದುಕೊಂಡು ಹೋಗುತ್ತಿದ್ದಾರೆ‌ ಎಂದರು.

ಎಲ್ಲಾ ರಾಷ್ಟ್ರಗಳ ಕೋವಿಡ್ ನಿರ್ವಹಿಸಲು ವಿಫಲವಾದಾಗ ಮೋದಿ ಉತ್ತಮವಾಗಿ ನಿರ್ವಹಣೆ ಮಾಡಿದರು. ಎಲ್ಲೆಡೆ ಇಂದು ಭಾರತಕ್ಕೆ ಗೌರವ ಇದೆ. ರಾಷ್ಟ್ರದ ಪ್ರತಿ ಹಳ್ಳಿಗೂ ಮೋದಿ ಕಾರ್ಯಕ್ರಮ ಮುಟ್ಟಿದೆ ಎಂದು ಹೇಳಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!