ಕಷ್ಟ ಪಟ್ಟು, ಕ್ರಾಸ್ ಡಯಟ್ಗಳನ್ನು ಮಾಡಿ ಏಕಾಏಕಿ ತೂಕ ಇಳಿಸಿದರೂ ಒಂದು ವಾರಕ್ಕೆಲ್ಲಾ ತೂಕ ಮತ್ತೆ ವಾಪಾಸ್ ಆಗಿಬಿಡುತ್ತದೆ. ಶಾಶ್ವತವಾಗಿ, ನೈಸರ್ಗಿಕವಾಗಿ ತೂಕ ಇಳಿಸುವುದು ಎಲ್ಲಕ್ಕಿಂತ ಬೆಸ್ಟ್ ಸೊಲ್ಯೂಷನ್, ಆರು ತಿಂಗಳಾಗಲಿ ಏನಾಯ್ತು? ಆರೋಗ್ಯಕರವಾಗಿ ಹೀಗೆ ತೂಕ ಇಳಿಸಿ..
ವ್ಯಾಯಾಮ ಮಾಡದೇ ತೂಕ ಇಳಿಸೋದು ಕಷ್ಟ, ತೀರಾ ಎಕ್ಸ್ಟ್ರೀಮ್ ಆದ ವ್ಯಾಯಾಮ ಅಲ್ಲದಿದ್ದರೂ ದೇಹ ದಂಡಿಸೋದನ್ನು ಮರೆಯಬೇಡಿ. ಈ ಅಭ್ಯಾಸ ಕಡೆವರೆಗೂ ನಿಮ್ಮ ಜೊತೆಯೇ ಇರುತ್ತದೆ.
ಕ್ಯಾಲೊರಿ ಮೇಲೆ ಗಮನ ಇರಲಿ, ಒಂದು ಪೀಸ್ ಪಿಝ್ಜಾ ಹಾಗೂ ಒಂದು ದೊಡ್ಡ ಬೌಲ್ ತರಕಾರಿ ಕೂಡ ಒಂದೇ ಕ್ಯಾಲೊರಿ ಇರುತ್ತದೆ. ಪಿಝ್ಝಾ ಜಂಕ್ಫುಡ್, ಮೈದಾ, ಪ್ರಿಸರ್ವೇಟೀವ್ಸ್ ಇರುತ್ತದೆ. ಆದರೆ ಒಂದು ಪೀಸ್ನಿಂದ ಹೊಟ್ಟೆ ಕೂಡ ತುಂಬೋದಿಲ್ಲ ಅಲ್ವಾ?
ಒಂದೇ ಬಾರಿಗೆ ತಿನ್ನೋದು ಬಿಡೋಕಾಗೋದಿಲ್ಲ, ನೀವು ತಿನ್ನುವ ಆಹಾರದ ಪ್ರಮಾಣ ಕಡಿಮೆ ಮಾಡುತ್ತಾ ಬನ್ನಿ ನಾಲ್ಕು ಚಪಾತಿ ತಿನ್ನುತ್ತಿದ್ದರೆ ಮೂರು ಮಾಡಿ, 10 ದಿನದ ನಂತರ ಎರಡೂ ವರೆ, ನಂತರ ಎರಡು ಹೀಗೆ.
ಒಂದು ಚಿಕ್ಕ ಬೌಲ್ ಆಲೂಗಡ್ಡೆ ಚಿಪ್ಸ್ ತಿನ್ನೋ ಬದಲು ಒಂದು ದೊಡ್ಡ ಬೌಲ್ ಪಾಪ್ಕಾರ್ನ್ ತಿನ್ನಿ, ಇದು ಈಸಿ ಹಾಗೂ ಹೆಲ್ತಿ ಸ್ನಾಕ್ಸ್
ಹಸಿವಾದಾಗ ಮಾತ್ರ ತಿನ್ನಿ, ಹಸಿವಿಲ್ಲದಿದ್ದರೂ ಹಸಿವಾಗಬಹುದು ಎಂದು ಮುಂಚೆಯೇ ಹೊಟ್ಟೆಗೆ ತುಂಬಿಸಬೇಡಿ.
ಸಕ್ಕರೆ ಪಾನೀಯಗಳನ್ನು ಮುಟ್ಟಬೇಡಿ, ಒಂದು ಹಣ್ಣು ತಿಂದುಬಿಡಿ ಆದರೆ ಜ್ಯೂಸ್ ಬೇಡ ಬಿಳಿ ಪದಾರ್ಥ ಆರೋಗ್ಯಕ್ಕೆ ಒಳ್ಳೆಯದಲ್ಲ. ಮೈದಾ, ಸಕ್ಕರೆ, ಉಪ್ಪು, ಸೋಡಾ ಹೆಚ್ಚಾದಷ್ಟು ಆರೋಗ್ಯಕ್ಕೆ ಹಾನಿ.
ಊಟದಲ್ಲಿ ಫೈಬರ್ ಎಷ್ಟಿದೆ? ಇದನ್ನು ಗಮನಿಸಿ ಜೀರ್ಣಕ್ರಿಯೆಗೆ ಫೈಬರ್ ಬೇಕೇ ಬೇಕು, ಇದು ದೀರ್ಘಕಾಲ ಹಸಿವಾಗದಂತೆಯೂ ನೋಡಿಕೊಳ್ಳುತ್ತದೆ.
ರಾತ್ರಿ ಊಟದ ಸಮಯದ ಬಗ್ಗೆ ಗಮನ ಹರಿಸಿ ಸಂಜೆ ಸೂರ್ಯಾಸ್ತ ಸಮಯದಲ್ಲಿ ಊಟ ಮಾಡಿ ನಂತರ ಏನೂ ತಿನ್ನದೆ ಇರುವುದು ಉತ್ತಮ ಅಭ್ಯಾಸ.
ಯಾರೇ ಆಗಲಿ ಒಂದೇ ದಿನಕ್ಕೆ ರಿಸಲ್ಟ್ ಸಿಗೋದಿಲ್ಲ, ಹಾಗೆಂದು ಗೀವ್ಅಪ್ ಮಾಡಬೇಡಿ, ಒಳ್ಳೆಯ ಕೆಲಸಗಳಿಗೆ ಸಮಯ ಹಿಡಿಯುತ್ತದೆ, ಮೊದಲು ಮನಸ್ಸು ಮಾಡಿ, ನನ್ನ ಆರೋಗ್ಯಕ್ಕಾಗಿ ನಾನು ಸಣ್ಣ ಆಗಬೇಕು, ಫಿಟ್ ಆಗಬೇಕು, ನನ್ನ ಮಕ್ಕಳು, ಪತಿ, ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಲು ನಾನು ಆರೋಗ್ಯವಾಗಿ ಇರುವುದು ಒಂದು ಗಿಫ್ಟ್, ಈ ಗಿಫ್ಟ್ನ್ನು ಕೊಡೋದಕ್ಕೆ ತಯಾರಾಗಿ. ತೂಕ ಇಳಿಕೆಯೂ ಆಗಿ ಫಿಟ್ ಆಗುತ್ತೀರಿ.