ಹೊಸದಿಗಂತ ಡಿಜಿಟಲ್ ಡೆಸ್ಕ್:
47ರ ಹರೆಯದಲ್ಲೂ ಸೂಪರ್‌ಸ್ಟಾರ್ ಮಹೇಶ್ ಬಾಬು ಯುವಕನಂತೆ ಕಾಣುತ್ತಾರೆ. ಹೆಣ್ಮಕ್ಕಳಿಂದ ಹಿಡಿದು ಹುಡಗರೂ ಕೂಡ ಮಹೇಶ್ ಬಾಬು ಎಂದರೆ ಕ್ರೇಜ್. ಮಹೇಶ್ ಇಷ್ಟು ಸುಂದರ ಮತ್ತು ಫಿಟ್ ಆಗಿರುವುದು ಹೇಗೆ ಎಂದು ಅಭಿಮಾನಿಗಳ ಜೊತೆಗೆ ಎಲ್ಲರಿಗೂ ಅನುಮಾನ. ಜೊತೆಗೆ ಇಷ್ಟು ಅಂದವಾಗಿರುವುದಕ್ಕೆ ಅವರೇನು ತಿಂತಾರೆ ಅನ್ನೋದಕ್ಕೆ ಫುಡ್ ಸೀಕ್ರೆಟ್ ರಿವೀಲ್ ಮಾಡಿದ್ದಾರೆ.
ಮಹೇಶ್ ಬಾಬು ಸಿಕ್ಕಿದ್ದೆಲ್ಲಾ ತಿನ್ನುವ ನಟನಲ್ಲ, ಅವರಿಗಾಗಿ ಪ್ರತ್ಯಖ ಬಾಣಸಿಗರೊಬ್ಬರನ್ನು ನೇಮಿಸಿಕೊಂಡಿದ್ದಾರಂತೆ. ಶೂಟಿಂಗ್‌ಗೆ ಹೋದರೂ ಅಲ್ಲಿನ ಅಡುಗೆ ತಿನ್ನುವ ಬದಲು ಅಡುಗೆ ಮಾಡಿಸಿಕೊಂಡೇ ತಿನ್ನುತ್ತೇನೆ ಎಂದು ಮಹೇಶ್ ಹೇಳಿದ್ದಾರೆ. ನಾನು ಡೈರಿ ಉತ್ಪನ್ನಗಳು ಮತ್ತು ಸಿಹಿತಿಂಡಿಗಳನ್ನು ತಿನ್ನುವುದಿಲ್ಲ ಎಂದು ಮಹೇಶ್ ಸಂದರ್ಶನವೊಂದರಲ್ಲಿ ಹೇಳಿದ್ದರು.
ಪ್ರತಿದಿನ ಬೆಳಿಗ್ಗೆ ಅವರು ತಿನ್ನುವ ಉಪಹಾರದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ತಿಂಡಿ ತಿನ್ನುತ್ತಿರುವ ಫೋಟೋವನ್ನು ಶೇರ್ ಮಾಡಿದ್ದು, ಇದು ನನ್ನ ದಿನಚರಿ. ನಾನು ರಾತ್ರಿ ನೆನೆಸಿದ ಓಟ್ಸ್, ಕೆಲವು ಮೊಳಕೆಯೊಡೆದ ಕಾಳುಗಳನ್ನು ತೆಗೆದುಕೊಳ್ಳುತ್ತೇನೆ. ಇದು ನನಗೆ ಶಕ್ತಿಯನ್ನು ನೀಡುತ್ತದೆ. ಅಷ್ಟೇ ಅಲ್ಲದೆ ಮಹೇಶ್ ಅವರು ತಮ್ಮ ಪೌಷ್ಟಿಕತಜ್ಞ ಲ್ಯೂಕ್ ಕೌಂಟಿನೊ ಅವರನ್ನು ಟ್ಯಾಗ್ ಮಾಡಿದ್ದಾರೆ.
ಮಹೇಶ್ ಶೇರ್ ಮಾಡಿರುವ ಈ ಫೋಟೋ ಮತ್ತು ವಿಷಯ ವೈರಲ್ ಆಗಿದೆ. ಅಭಿಮಾನಿಗಳಲ್ಲಿ ಯಾರಾದರೂ ಮಹೇಶ್ ಅವರ ಉಪಹಾರವನ್ನು ತಿನ್ನಲು ಪ್ರಯತ್ನಿಸುತ್ತಾರೆಯೇ ಅಥವಾ ಮಹೇಶ್ ಸೂಚಿಸಿದ ಪೌಷ್ಟಿಕತಜ್ಞರ ಬಳಿ ಹೋಗುತ್ತಾರೆಯೇ ಎಂದು ನೋಡಬೇಕಾಗಿದೆ.