ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾನ್ಯವಾಗಿ ಕ್ಯಾರೆಟ್ ಹಲ್ವಾ ತಿಂದು ಸವಿದಿರುತ್ತಿರಾ. ಆದರೆ ಎಂದಾದರು ಒಮ್ಮೆ ಬೀಟ್ ರೂಟ್ ಹಲ್ವಾ ಮಾಡಿ ಸವಿದು ನೋಡಿದ್ದೀರಾ ? ಇಲ್ಲಾಂದ್ರೆ ಈಗಲೇ ಮನೆಯಲ್ಲಿ ಒಮ್ಮೆ ಟ್ರೈ ಮಾಡಿ ನೋಡಿ.
ಬೇಕಾಗುವ ಸಾಮಾಗ್ರಿಗಳು:
ಬೀಟ್ ರೂಟ್
ಸಕ್ಕರೆ
ಹಾಲು
ಏಲಕ್ಕಿ ಪುಡಿ
ಬಾದಾಮಿ
ಗೋಡಂಬಿ
ತುಪ್ಪ
ಮಾಡುವ ವಿಧಾನ:
* ಮೊದಲು ಬೀಟ್ ರೂಟ್ ನ ಸಿಪ್ಪೆ ಸುಲಿದು ತುರಿಯಿರಿ.
* ಬಾದಾಮಿಯನ್ನು ಬಿಸಿ ನೀರಿನಲ್ಲಿ 10 ನಿಮಿಷ ಹಾಕಿ ಅದರ ಸಿಪ್ಪೆ ಸುಲಿಯಿರಿ, ನಂತರ ಚಿಕ್ಕ-ಚಿಕ್ಕ ಪೀಸ್ ಮಾಡಿ ಕತ್ತರಿಸಿಡಿ.
* ಇನ್ನೊಂದೆಡೆ ಪ್ಯಾನ್ ಗೆ ತುಪ್ಪ ಹಾಕಿ ಬಿಸಿ ಮಾಡಿ ಅದರಲ್ಲಿ ಗೋಡಂಬಿ ಹಾಕಿ 2-3 ನಿಮಿಷ ಫ್ರೈ ಮಾಡಿ.
* ಗೋಡಂಬಿ ಫ್ರೈ ಮಾಡಿದ ಪ್ಯಾನ್ ಗೆ ತುಪ್ಪ ಹಾಕಿ ಬಿಸಿ ಮಾಡಿ.
* ಈಗ ಎರಡು ಕಪ್ ಹಾಲು ಮತ್ತು ಸಕ್ಕರೆ ಹಾಕಿ ಕಡಿಮೆ ಉರಿಯಲ್ಲಿ ಬೀಟ್ ರೂಟ್ ಬೇಯಿಸಿ, ಹಾಲು ಬತ್ತುವವರೆಗೆ ಬೇಯಿಸಿ, ಆಗಾಗ ಸೌಟ್ ನಿಂದ ತಿರುಗಿಸುತ್ತಾ ಬೇಯಿಸಬೇಕು.
* ಈಗ ಏಲಕ್ಕಿ ಪುಡಿ ಹಾಕಿ ಉಳಿದ ತುಪ್ಪವನ್ನು ಸುರಿದು ಕಡಿಮೆ ಉರಿಯಲ್ಲಿ 5 ನಿಮಿಷ ಬೇಯಿಸಿ, ಉರಿಯಿಂದ ಇಳಿಸಿ, ಗೋಡಂಬಿ ಬಾದಾಮಿಯಿಂದ ಅಲಂಕರಿಸಿ ತಣ್ಣಗಾಗಲು ಇಡಿ. ಈಗ ಬೀಟ್ರೂಟ್ ಹಲ್ವಾ ಸವಿದು ನೋಡಿ.