Saturday, December 20, 2025

ಬೌಲಿಂಗ್ ನಲ್ಲೂ ಸೂರ್ಯ ಪಡೆ ಅಬ್ಬರ: ಆಫ್ರಿಕಾ ವಿರುದ್ದ ಟಿ20 ಸರಣಿ ಗೆದ್ದ ಭಾರತ

ಹೊಸದಿಗಂತ ಡಿಜಿಟಲ್ ಡೆಸ್ಕ್

ಸೌತ್ ಆಫ್ರಿಕಾ ವಿರುದ್ದದ ಕೊನೆಯ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಗೆದ್ದು ಸಂಭ್ರಮಿಸಿದ್ದು, ಸರಣಿ ವಶಪಡಿಸಿಕೊಂಡಿದೆ.

ಸ್ಫೋಟಕ ಬ್ಯಾಟಿಂಗ್ ಮೂಲಕ ಭಾರತ 231 ರನ್ ಸಿಡಿಸಿತ್ತು. ಇತ್ತ ಗುರಿ ಬೆನ್ನಟ್ಟಿದ ಸೌತ್ ಆಫ್ರಿಕಾ ತಂ ವರುಣ್ ಚಕ್ರವರ್ತಿ ಸೇರಿದಂತೆ ಟೀಂ ಇಂಡಿಯಾ ಬೌಲಿಂಗ್ ದಾಳಿಗೆ ತತ್ತರಿಸಿದ್ದು, 201 ರನ್ ಸಿಡಿಸಿತು. ಈ ಮೂಲಕ ಭಾರತ 30 ರನ್ ಗೆಲುವು ಕಂಡಿತು.

ಜಸ್ಪ್ರೀತ್ ಬುಮ್ರಾ ಹಾಗೂ ವರುಣ್ ಚಕ್ರವರ್ತಿ ದಾಳಿಗೆ ಸೌತ್ ಆಫ್ರಿಕಾ ತಂಡ ಸಂಕಷ್ಟಕ್ಕೆ ಸಿಲುಕಿತ್ತು. ಆರಂಭದಲ್ಲೇ ವರುಣ್ ಮೋಡಿಗೆ ಸೌತ್ ಆಪ್ರಿಕಾ ರನ್ ಗಳಿಸಲು ಪರದಾಡಿತು. ಇತ್ತ ಸೌತ್ ಆಫ್ರಿಕಾ ತಂಡಕ್ಕೆ ಆಸರೆಯಾಗಿದ್ದ ಕ್ವಿಂಟನ್ ಡಿಕಾಕ್ ಅಬ್ಬರಕ್ಕೆ ಬುಮ್ರಾ ಬೇಕ್ ಬಾಕಿದ್ದರು. ಡಿಕಾಕ್ 35 ಎಸೆದಲ್ಲಿ 65 ರನ್ ಸಿಡಿಸಿ ಅಪಾಯದ ಸೂಚನೆ ನೀಡಿದ್ದರು.

ವರುಣ್ ಚಕ್ರವರ್ತಿ ನಾಲ್ಕು ವಿಕೆಟ್ ಕಬಳಿಸಿದರೆ, ಬುಮ್ರಾ 2, ಅರ್ಶದೀಪ್ ಹಾಗೂ ಹಾರ್ದಿಕ್ ಪಾಂಡ್ಯ ತವಾ 1 ವಿಕೆಟ್ ಕಬಳಿಸಿ ಮಿಂಚಿದರು.

ಸೌತ್ ಆಫ್ರಿಕಾ ವಿರುದ್ಧದ 5 ಪಂದ್ಯಗಲ ಟಿ20 ಸರಣಿಯಲ್ಲಿ ನಾಲ್ಕನೇ ಟಿ20 ಪಂದ್ಯ ದಟ್ಟ ಮಂಜಿನ ಕಾರಣ ರದ್ದಾಗಿತ್ತು. 5 ಪಂದ್ಯಗಳ ಸರಣಿಯನ್ನು ಭಾರತ 3-1 ಅಂತರದಿಂದ ಗೆದ್ದುಕೊಂಡಿದೆ.

error: Content is protected !!