ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಹರಾ ಸಹಕಾರಿ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿ ಕೈಸುಟ್ಟುಕೊಂಡವರಿಗೆ ಮೋದಿ ಸರ್ಕಾರ ನ್ಯಾಯ ಒದಗಿಸಲು ಮುಂದಾಗಿದೆ.
ಸಹರಾ ರೀಫಂಡ್ ಪೋರ್ಟಲ್‌ನ್ನು ಮೋದಿ ಸರ್ಕಾರ ಆರಂಭಿಸಿದ್ದು, ಗೃಹ ಸಚಿವ ಅಮಿತ್ ಶಾ ಯೋಜನೆಗೆ ಚಾಲನೆ ನೀಡಿದ್ದಾರೆ. ಹಣ ಕಳೆದುಕೊಂಡವರು ಪೋರ್ಟಲ್ ಮೂಲಕ ರಿಜಿಸ್ಟರ್ ಮಾಡಿಕೊಳ್ಳಬೇಕು. ಇದಾದ 45 ದಿನಗಳಲ್ಲಿ ಖಾತೆಗೆ ಹಣ ಜಮೆ ಆಗಲಿದೆ.
ಸುಬ್ರತೋ ರಾಯ್ ಸಹರಾ ಇಂಡಿಯಾ ಪರಿವಾರದ ಅಧ್ಯಕ್ಷರಾಗಿದ್ದರು, ರಿಯಲ್ ಎಸ್ಟೇಟ್, ಬ್ಯಾಂಕೇತರ ಹಣಕಾಸು ಸಂಸ್ಥೆ, ವಿಮಾನಯಾನ ಸಂಸ್ಥೆಯನ್ನು ಖರೀದಿ ಮಾಡಿದ್ದರು. ಇದರಲ್ಲಿ ಹಲವು ಉದ್ಯಮಗಳು ಕೈಕೊಟ್ಟು ಸಾವಿರಾರು ಕೋಟಿ ಸಾಲದಲ್ಲಿ ಮುಳುಗುವಂತಾಯ್ತು. ಕೋಟ್ಯಂತರ ಮಂದಿ ಸಹರಾ ಸಹಕಾರಿ ಸಂಸ್ಥೆಯಲ್ಲಿ ಹೂಡಿಕೆ ಮಾಡಿದ್ದರು.
ಸುಪ್ರೀಂ ಕೋರ್ಟ್ ಸೆಬಿ ಸಹರಾ ರೀಫಂಡ್ ಖಾತೆಯಲ್ಲಿ ಇರುವ 5,000 ಕೋಟಿ ರೂಪಾಯಿ ಹಣವನ್ನು ಹೂಡಿಕೆ ಮಾಡಿ ಕಳೆದುಕೊಂಡವರಿಗೆ ಹಣ ಹಂಚಿ ಎಂದು ಸೂಚಿಸಿದ್ದು, ಅಂತೆಯೇ ಮೋದಿ ಸರ್ಕಾರ ರೀಫಂಡ್ ಪೋರ್ಟಲ್ ಆರಂಭಿಸಿದೆ.
ಹೂಡಿಕೆ ಹಣ ವಾಪಸ್ ಪಡೆಯಲು ಕೆಲ ದಾಖಲೆ ಸಲ್ಲಿಕೆ ಮಾಡಬೇಕು
- ಹೂಡಿಕೆಯ ಸದಸ್ಯತ್ವ ಸಂಖ್ಯೆ
- ಹೂಡಿಕೆ ಮಾಡಿದ ಖಾತೆ ಸಂಖ್ಯೆ
- ಆಧಾರ್ ಲಿಂಕ್ ಮಾಡಿದ ಮೊಬೈಲ್ ಸಂಖ್ಯೆ
- ಪಾಸ್‌ಬುಕ್ ವಿವರ
- 50,000 ರೂಪಾಯಿಗಿಂತ ಮೇಲಿದ್ದರೆ ಪಾನ್ ಕಾರ್ಡ್ ಸಂಖ್ಯೆ