ಹೊಸದಿಗಂತ ವರದಿ,ರಾಣೇಬೆನ್ನೂರು:
ಚಾಲಕನ ನಿಯಂತ್ರಣ ತಪ್ಪಿ ಸಾರಿಗೆ ಸಂಸ್ಥೆ ಬಸ್ ಭತ್ತದ ಗದ್ದೆಗೆ ಉರುಳಿ ಬಿದ್ದು, ಚಾಲಕ ಹಾಗೂ ನಿರ್ವಾಹಕ ಸೇರಿ ೧೩ ಜನ ಪ್ರಯಾಣಿಕರು ಗಾಯಗೊಂಡ ಘಟನೆ ತಾಲೂಕಿನ ಹೀಲದಹಳ್ಳಿ ಗ್ರಾಮದ ಬಳಿ ಬುಧವಾರ ಸಂಭವಿಸಿದೆ.
ಬಸ್‌ನ ಚಾಲಕ ರವಿಕುಮಾರ ಗಂದೆಣ್ಣಿ ಹಾಗೂ ನಿರ್ವಾಹಕ ಅಜ್ಜಯ್ಯ ಅಡಿಗೇರ ಎಂಬುವರು ಸೇರಿ ೧೩ ಜನ ಗಾಯಗೊಂಡಿದ್ದಾರೆ. ರಾಣೆಬೆನ್ನೂರ ನಗರದಿಂದ ಬಸ್ ಬೇಲೂರು ಗ್ರಾಮಕ್ಕೆ ಹೊರಟಿತ್ತು. ಹೀಲದಹಳ್ಳಿ ಬಳಿ ರಸ್ತೆ ಪಕ್ಕ ನಿಲ್ಲಿಸಿದ ಬೈಕ್ ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿದ ಬಸ್ ಭತ್ತದ ಗದ್ದೆಗೆ ಉರುಳಿ ಬಿದ್ದಿದೆ. ಗಾಯಾಳುಗಳನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.