ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದಿನಿಂದ ಫಿಫಾ ವಿಶ್ವಕಪ್ ಆರಂಭವಾಗಲಿದ್ದು, ಆಕ್ಲೆಂಡ್‌ನಲ್ಲಿ ಕ್ರೀಡಾಪಟುಗಳು ತಂಗಿದ್ದಾರೆ.
ಪಂದ್ಯ ಆರಂಭಕ್ಕೂ ಕೆಲವೇ ಗಂಟೆಗಳ ಮುನ್ನ ಆಕ್ಲೆಂಡ್‌ನ ಹೊಟೇಲ್ ಬಳಿಯೇ ಫೈರಿಂಗ್ ನಡೆದಿದ್ದು ಮೂವರು ಮೃತಪಟ್ಟಿದ್ದಾರೆ. ಬಂದೂಕುದಾರಿಯೊಬ್ಬ ಏಕಾಏಕಿ ಹೊಟೇಲ್ ಬಳಿ ದಾಳಿ ನಡೆಸಿದ್ದು, ಮೂವರು ಮೃತಪಟ್ಟಿದ್ದಾರೆ, ಹಲವರಿಗೆ ಗಾಯಗಳಾಗಿವೆ.
ಈ ಬಾರಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ವಿಶ್ವಕಪ್‌ಗೆ ಆತಿಥ್ಯ ವಹಿಸಿದೆ. ಘಟನೆಯಲ್ಲಿ ಯಾವುದೇ ಕ್ರೀಡಾಪಟುಗಳಿಗೆ ಹಾನಿಯಾಗಿಲ್ಲ. ನಾರ್ವೆ ತಂಡ ತಂಗಿದ್ದ ಸಮೀಪವೇ ಫೈರಿಂಗ್ ನಡೆದಿದ್ದು, ತಂಡ ಟಿವಿಯಲ್ಲಿ ಮಾಹಿತಿ ತಿಳಿದುಕೊಂಡಿದ್ದಾರೆ. ಹೆಲಿಕಾಪ್ಟರ್ ಮುಖಾಂತರ ತಂಡವನ್ನು ಬೇರೆ ಹೊಟೇಲ್‌ಗೆ ಶಿಫ್ಟ್ ಮಾಡಲಾಗಿದೆ.