ಹೊಸದಿಗಂತ ಡಿಜಿಟಲ್ ಡೆಸ್ಕ್:
ವೈದ್ಯಕೀಯ ಕೌನ್ಸೆಲಿಂಗ್ ಸಮಿತಿ (MCC), ನೀಟ್ ಯುಜಿ 2023ರ ಕೌನ್ಸೆಲಿಂಗ್‌ಗೆ ನೋಂದಣಿ ಪ್ರಕ್ರಿಯೆಯನ್ನು ಇಂದಿನಿಂದ ಪ್ರಾರಂಭಿಸಿದೆ.
ನೀಟ್ ಯುಜಿ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಎಲ್ಲಾ ಅಭ್ಯರ್ಥಿಗಳು ಎಂಬಿಬಿಎಸ್, ಬಿಡಿಎಸ್ ಕೋರ್ಸ್‌ಗಳಿಗೆ mcc.nic.in ಎಂಸಿಸಿಯ ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಜುಲೈ 25, 2023 ಕೊನೆಯ ದಿನವಾಗಿರುತ್ತದೆ. ಆಯ್ಕೆ ಭರ್ತಿ ಮತ್ತು ಲಾಕಿಂಗ್ ಸೌಲಭ್ಯವನ್ನು ಜುಲೈ 22 ರಿಂದ ಜುಲೈ 26, 2023ರ ವರೆಗೆ ನಡೆಸಲಾಗುವುದು.
ಸೀಟು ಹಂಚಿಕೆಯ ಪ್ರಕ್ರಿಯೆಯು ಜುಲೈ 27 ರಿಂದ ಜುಲೈ 28, 2023ರ ವರೆಗೆ ನಡೆಯಲಿದೆ. ಸೀಟು ಹಂಚಿಕೆ ಫಲಿತಾಂಶವನ್ನು ಜುಲೈ 29, 2023 ರಂದು ಪ್ರಕಟ ಮಾಡಲಾಗುವುದು.