ಹೊಸದಿಗಂತ ವರದಿ, ಕಲಬುರಗಿ :
ಕಲಬುರಗಿಯಲ್ಲಿ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ನಗರದ ಬಹುತೇಕ ಚರಂಡಿಗಳು ತುಂಬಿ ಹರಿಯುತ್ತಿವೆ. ರಸ್ತೆಗಳ ಮೇಲೆಲ್ಲಾ ಚರಂಡಿಗಳ ನೀರು ಹರಿಯುತ್ತಿದ್ದು, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.
ನಗರದಾದ್ಯಂತ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ನಗರದ ವಾರ್ಡ್ ನಂಬರ್ -02ರ ಆಶ್ರಯ ಕಾಲೋನಿಯ ಸೂರ್ಯಕಾಂತ ಕಂದಗೂಳ ಅವರ ಮನೆಗೆ ಮಳೆಯ ನೀರು ನುಗ್ಗಿ ಮನೆಯ ಸಾಮಾನುಗಳೆಲ್ಲಾ ಸಂಪೂರ್ಣವಾಗಿ ಹಾಳಾಗಿವೆ.