ಸಂದರ್ಶನ ಇದೆ ಬನ್ನಿ: ಮಾತು ನಂಬಿ ಹೊಟೇಲ್‌ಗೆ ಹೋದ ನಟಿಗೆ ಕಾದಿತ್ತು ಶಾಕ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಇನ್ಮುಂದೆ ಸಂದರ್ಶನ ಇದೆ ಬನ್ನಿ ಅಂತ ಯಾರಾದರು ಕರೆದರೆ, ಒಮ್ಮೆ ಯೋಚಿಸಿ ಹೆಜ್ಜೆ ಇಡಿ. ಏಕೆಂದರೆ ಸಂದರ್ಶನದ ನೆಪದಲ್ಲಿ ಕರೆದು ನಟಿಯೊಬ್ಬಳಿಗೆ ಅತ್ಯಾಚಾರವೆಸಗಿರುವ ಘಟನೆ ವರದಿಯಾಗಿದೆ.

ಇನ್​ಸ್ಟಾಗ್ರಾಂನಲ್ಲಿ ಪರಿಚಯವಾದ ವ್ಯಕ್ತಿಯೋರ್ವನಿಂದ ಅತ್ಯಾಚಾರಕ್ಕೆ ಒಳಗಾಗಿದ್ದೇನೆ ಎಂದು ಭೋಜ್​ಪುರಿ ನಟಿಯೊಬ್ಬಳು ದೂರು ದಾಖಲಿಸಿದ್ದಾರೆ.

ಆತ ಸಂದರ್ಶನದ ನೆಪದಲ್ಲಿ ಗುರುಗ್ರಾಮದ ಹೋಟೆಲ್​ಗೆ ಕರೆದು, ಈ ಕೃತ್ಯ ಎಸಗಿದ್ದಾನೆ ಎಂದು ದೂರಿನಲ್ಲಿ ಸಂತ್ರಸ್ತೆ ನಟಿ ಉಲ್ಲೇಖಿಸಿದ್ದಾರೆ.

ಅತ್ಯಾಚಾರದ ಕುರಿತು ಹೊರಗಡೆ ಎಲ್ಲಾದರು ಮಾತನಾಡಿದರೆ ಕೊಲೆ ಮಾಡುವುದಾಗಿಯೂ ಆತ ಬೆದರಿಕೆ ಹಾಕಿದ್ದ ಎಂದು ಸಂತ್ರಸ್ತೆ ದೂರಿದ್ದಾಳೆ.

ಆರೋಪಿ ಮಹೇಶ್​, ಗುರುಗ್ರಾಮದ ಛಕ್ಕಪುರ್​ ಏರಿಯಾದ ನಿವಾಸಿ. ಆತನ ವಿರುದ್ಧ ಉದ್ಯೋಗ ವಿಹಾರ ಪೊಲೀಸ್​ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್​ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಬಂಧನಕ್ಕೆ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!