ಕೇಳ್ರಪ್ಪೋ ಕೇಳಿ: ಪಿಜ್ಜಾ ಪ್ರಿಯರಿಗೆ ಗುಡ್‌ ನ್ಯೂಸ್‌, ಇನ್ಮುಂದೆ ಕೇವಲ 49ರೂ.ಗೆ ಪಿಜ್ಜಾ ತಿನ್ನುವ ಭಾಗ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಈಗಿನ ದಿನಗಳಲ್ಲಿ ಊಟಕ್ಕಿಂತ ಸ್ನ್ಯಾಕ್ಸ್‌, ಫಾಸ್ಟ್‌ಫುಡ್‌ ತಿನ್ನುವುದನ್ನೇ ಜನ ಹೆಚ್ಚು ಇಷ್ಟ ಪಡ್ತಾರೆ. ಅದ್ರಲ್ಲೂ ಪಿಜ್ಜಾ ಅಂದ್ರೆ ಅದೆಲ್ಲಿಲ್ಲದ ಪ್ರೀತಿ.

ತರಕಾರಿ ತಿನ್ನಿ ಆದರೆ ಪಿಜ್ಜಾ ತಿನ್ಬೇಡಿ ಅಂತಾರೆ ಪೋಷಕರು. ಆದರೆ ಈಗಿನ ಜನರು ಹೆಚ್ಚು ಇಷ್ಟ ಪಡೋದೆ ಇಂತಹ ಫಾಸ್ಟ್‌ಫುಡ್‌ಗಳು. ಪೋಷಕರು ಬೈತಾರೆ ಅಂತ ತಿನ್ನೋದನ್ನ ಬಿಡೋಕಾಗುತ್ತಾ?, ಆದರೆ ಖುಷಿಯ ವಿಷಯ ಏನಂದ್ರೆ ಪಿಜ್ಜಾ ಇನ್ಮುಂದೆ ಕೇವಲ 49ರೂ.ಗೆ ಕೂಡ ಸಿಗುತ್ತೆ.

ಹೌದು ಡೊಮಿನೊಸ್ ಕಂಪನಿಯು ಕಡಿಮೆ ಬೆಲೆಯಲ್ಲಿ ಹೊಸ ಪಿಜ್ಜಾ ಲಾಂಚ್ ಮಾಡಿದೆ. ಅತಿ ಕಡಿಮೆ ಬೆಲೆಯಲ್ಲಿ ಪಿಜ್ಜಾ ಸಿಗುವಂತಾಗಲಿ ಮತ್ತು ಗ್ರಾಹಕರನ್ನು ತೃಪ್ತಿ ಪಡಿಸಬೇಕೆಂದು ಈ ಹೆಜ್ಜೆ ಇಡುತ್ತಿದ್ದೇವೆ ಎಂದು ಡೊಮಿನೊಸ್ ಪಿಜ್ಜಾ ಭಾರತದ ಫ್ರಾಂಚೈಸಿ ಸಿಇಒ ಹೇಳಿದ್ದಾರೆ.

ಡೊಮಿನೊಸ್ ಹೊಸದಾಗಿ ಪರಿಚಯಿಸಿರುವ 49 ರೂಪಾಯಿ ಬೆಲೆಯ ಪಿಜ್ಜಾ 7 ಇಂಚುಗಳಲ್ಲಿ ಇರಲಿದೆ. ಭಾರತದ ಎಲ್ಲ ಡೊಮಿನೊಸ್ ಶಾಖೆಗಳಲ್ಲೂ 49 ರೂಪಾಯಿ ಬೆಲೆಯ ಈ ಪಿಜ್ಜಾ ಸಿಗಲಿದೆ. ಕಡಿಮೆ ಬೆಲೆಯಲ್ಲಿ ಪಿಜ್ಜಾ ತಿಂದು ಬಾಯಿ ಚಪ್ಪರಿಸುವ ಅವಕಾಶ ಇನ್ಮುಂದೆ ನಿಮ್ಮದಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!