ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೀರೆಕಾಯಿಯಿಂದ ದೋಸೆ, ಪಲ್ಯ, ಸಾಂಬಾರು ಪದಾರ್ಥಗಳನ್ನು ಮಾಡುವುದು ನಿಮಗೆಲ್ಲಾ ತಿಳಿದಿದೆ. ಆದರೆ ಈ ಹೀರೆಕಾಯಿಗಿಂತ ಅದರ ಸಿಪ್ಪೆಯಲ್ಲಿ ಮಾಡುವ ಅಡುಗೆಗಳು ಇನ್ನೂ ರುಚಿಕರವಾಗಿರುತ್ತದೆ ಗೊತ್ತಾ? ಹೌದು ಹೀರೆಕಾಯಿಯ ರುಚಿಗಿಂತ ಅದರ ಸಿಪ್ಪೆಯಿಂದ ಮಾಡುವ ಖಾದ್ಯಗಳೂ ಇನ್ನಷ್ಟು ರುಚಿಯಾಗಿರುತ್ತದೆ.
ಹೀರೆಕಾಯಿ ಸಿಪ್ಪೆಯಿಂದ ನಾವ್ಯಾಕೆ ಅಡುಗೆ ಮಾಡಬಾರದು ಅಂತ ಯೋಚಿಸ್ತಿದೀರಾ? ಹಾಗಾದ್ರೆ ಈಗಲೇ ಮಾಡಿ ನೋಡಿ ಹೀರೆಕಾಯಿ ಸಿಪ್ಪೆಯ ಚಟ್ನಿ.
ಬೇಕಾಗುವ ಸಾಮಾಗ್ರಿಗಳು
ಹೀರತೆಕಾಯಿ ಸಿಪ್ಪೆ
ಒಣ ಮೆಣಸು
ಉದ್ದಿನ ಬೇಳೆ
ತೆಂಗಿನ ತುರಿ
ಹುಣಸೆ ಹಣ್ಣು
ಉಪ್ಪು
ಇಂಗು
ಕರಿಬೇವಿನ ಎಲೆ
ಮಾಡುವ ವಿಧಾನ
* ಹೀರೆಕಾಯಿ ಸಿಪ್ಪೆಯನ್ನು ಚಿಕ್ಕ ಬಾಣಲಿಯಲ್ಲಿ ಹಾಕಿ ಜೊತೆಗೆ ಸ್ವಲ್ಪ ಎಣ್ಣೆ ಹಾಕಿ ಹುರಿದುಕೊಳ್ಳಿ.
* ಈಗ ಅದನ್ನು ತಟ್ಟೆಗೆ ತೆಗೆದಿಟ್ಟು, ಅದೇ ಬಾಣಲಿಗೆ ಒಂದು ಚಮಚ ಎಣ್ಣೆ ಹಾಕಿ. ಅದಕ್ಕೆ ಸ್ವಲ್ಪ ಉದ್ದಿನಬೇಳೆ, ಒಣಮೆಣಸು ಹಾಕಿ.
* ಈಗ ಹುರಿದ ಸಿಪ್ಪೆಯೊಂದಿಗೆ ಸೇರಿಸಿ ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು.
* ಹೀಗೆ ರುಬ್ಬುವಾಗ ಜತೆಗೆ ಸ್ವಲ್ಪ ನೆನೆಸಿಟ್ಟ ಹುಣಸೆಹಣ್ಣು, ತೆಂಗಿನಕಾಯಿ , ರುಚಿಗೆ ತಕ್ಕ ಉಪ್ಪು ಹಾಕಿ ರುಬ್ಬಿ.
* ನಂತರ ಒಗ್ಗರಣೆ ಪಾತ್ರೆಗೆ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ ಇದಕ್ಕೆ ಚಿಟಿಕೆಯಷ್ಟು ಇಂಗು ಮತ್ತು ಕರಿಬೇವಿನ ಎಲೆ ಹಾಕಿ ಚಟ್ನಿಗೆ ಒಗ್ಗರಣೆ ಕೊಟ್ಟರೆ ಸೂಪರ್ ಹೀರೆಕಾಯಿ ಚಟ್ನಿ ರೆಡಿ.