ಶ್ರೀ ಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ಮಸೀದಿ ವಿವಾದ: ಹೈಕೋರ್ಟ್‌ನಲ್ಲಿ ವಿಚಾರಣೆ ನಡೆದರೆ ಉತ್ತಮ ಎಂದ ಸುಪ್ರೀಂ ಕೋರ್ಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಥುರಾ ಶ್ರೀ ಕೃಷ್ಣ ಜನ್ಮಭೂಮಿ (Krishna Janambhoomi) ಶಾಹಿ ಈದ್ಗಾ ಮಸೀದಿ (Shahi Masjid Idgah) ವಿವಾದ ಸಮಾಜದಲ್ಲಿ ಅಶಾಂತಿಗೆ ಕಾರಣವಾಗ ಬಹುದು ಈ ಹಿನ್ನೆಲೆ ಸಿವಿಲ್ ಮೊಕದ್ದಮೆಯನ್ನು ಅಲಹಾಬಾದ್ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಸಿದರೆ ಉತ್ತಮ ಎಂದು ಸುಪ್ರೀಂ ಕೋರ್ಟ್ (Supreme Court) ಅಭಿಪ್ರಾಯಪಟ್ಟಿದೆ.

ಪ್ರಕರಣವನ್ನು ವಿಚಾರಣಾ ನ್ಯಾಯಾಲಯದಿಂದ ಹೈಕೋರ್ಟ್‌ಗೆ ವರ್ಗಾಯಿಸಲು ಹಿಂದು ಪಕ್ಷಗಳ ಮನವಿಯನ್ನು ಅನುಮತಿಸಿದ ಅಲಹಾಬಾದ್ ಹೈಕೋರ್ಟ್‌ನ (Allahbad High Court) ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ನ್ಯಾ. ಸಂಜಯ್ ಕಿಶನ್ ಕೌಲ್ ಮತ್ತು ಸುಧಾಂಶು ಧುಲಿಯಾ ಅವರ ಪೀಠವು ಪ್ರಕರಣಗಳ ವಿಚಾರಣೆಗೆ ಹೈಕೋರ್ಟ್‌ಗಳು ಉತ್ತಮ ಸ್ಥಾನ ಮತ್ತು ಸೂಕ್ತವಾಗಿವೆ ಎಂದು ಹೇಳಿದೆ.

ಶಾಹಿ ಈದ್ಗಾ ಮಸೀದಿಯ ಸಮಿತಿ ಮ್ಯಾನೇಜ್‌ಮೆಂಟ್ ಟ್ರಸ್ಟ್‌ ಪರವಾಗಿ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ವಕೀಲ ಆರ್‌ಹೆಚ್‌ಎ ಸಿಕಂದರ್ ಅರ್ಜಿ ಸಲ್ಲಿಸಿದ್ದರು‌. ವಿಚಾರಣೆ ವೇಳೆ ವಾದ ಮಂಡಿಸಿದ ಅವರು, ವರ್ಗಾವಣೆ ಅರ್ಜಿ ಸಲ್ಲಿಕೆಯಾಗದಿದ್ದರೂ ಹೈಕೋರ್ಟ್ ಆದೇಶ ಜಾರಿಯಾಗಿದೆ. ವಿಚಾರಣೆಯನ್ನು ವಿಳಂಬಗೊಳಿಸಲು ಯಾರೂ ಬಯಸುವುದಿಲ್ಲ. ಆದರೆ ಪ್ರಕರಣದ ಎಲ್ಲಾ ಕಕ್ಷಿದಾರರು ವಿಚಾರಣೆಗಾಗಿ ಪ್ರಯಾಗ್‌ರಾಜ್‌ಗೆ ಪ್ರಯಾಣಿಸಲು ಅವಕಾಶವಿದೆಯೇ ಎಂದು ಪ್ರಶ್ನಿಸಿದ್ದರು.

ಈ ವೇಳೆ ನ್ಯಾಯಮೂರ್ತಿ ಕೌಲ್, ಅಂತಹ ಸಮಸ್ಯೆಗಳನ್ನು ಹೈಕೋರ್ಟ್‌ಗಳು ನಿಭಾಯಿಸಿದರೆ ಉತ್ತಮ ಎಂದ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!