ಹೊಸದಿಗಂತ ಡಿಜಿಟಲ್ ಡೆಸ್ಕ್:
ಜ್ಞಾನವಾಪಿ ಮಸೀದಿ ಆವರಣದಲ್ಲಿ ವೈಜ್ಞಾನಿಕ ಸಮೀಕ್ಷೆಗೆ ವಾರಣಾಸಿ ಕೋರ್ಟ್ ಅನುಮತಿ ನೀಡಿದೆ.ಈ ಮೂಲಕ ಹಿಂದುಗಳಿಗೆ ಜಯ ಸಿಕ್ಕಿದಂತಾಗಿದೆ.
ಈ ಕುರಿತು ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ಆಗಸ್ಟ್ 4ರ ಒಳಗಾಗಿ ತನಿಖೆ ನಡೆಸಬೇಕು ಎಂದು ಕೋರ್ಟ್ ಹೇಳಿದೆ.
ಈ ವೇಳೆ ಅಧಿಕಾರಿಗಳು ಆವರಣದ ತಾಂತ್ರಿಕ ಸಮೀಕ್ಷೆಯನ್ನಷ್ಟೇ ಮಾಡಬೇಕು. ಯಾವುದೇ ರೀತಿಯ ಉತ್ಖನನ ಕಾರ್ಯಗಳನ್ನು ಮಾಡುವಂತಿಲ್ಲ ಎಂದು ತಿಳಿಸಲಾಗಿದೆ.
ಆದ್ರೆ ಜ್ಞಾನವಾಪಿಯಲ್ಲಿ ಇರುವ ಶಿವಲಿಂಗ ಎಂದು ಹೇಳಲಾಗುವ ವಜುಕಾನಾದ ಪ್ರದೇಶದ ಸರ್ವೆ ಇರುವುದಿಲ್ಲ. ಇದಕ್ಕೆ ಸುಪ್ರೀಂ ಕೋರ್ಟ್‌ನ ಅನುಮತಿ ಬೇಕಾಗಿದೆ. ಈ ಪ್ರದೇಶವನ್ನು ಹೊರತುಪಡಿಸಿ ಉಳಿದೆಲ್ಲಾ ಕಡೆ ವೈಜ್ಞಾನಿಕ ಸಮೀಕ್ಷೆ ನಡೆಸಲು ಅನುಮತಿ ನೀಡಲಾಗಿದೆ.
ಇತ್ತ ವೈಜ್ಞಾನಿಕ ಸರ್ವೇಗೆ ಮುಸ್ಲಿಂ ಕಡೆಯವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಎರಡೂ ಕಡೆಯ ವಾದ-ವಿವಾದಗಳನ್ನು ಆಲಿಸಿದ ಕೋರ್ಟ್ ಎಎಸ್‌ಐ ಸರ್ವೇಗೆ ಅನುಮತಿ ನೀಡಿದೆ.
ಶೃಂಗಾರ್ ಗೌರಿ-ಜ್ಞಾನವಾಪಿ ಸಂಕೀರ್ಣದಲ್ಲಿ ವೈಜ್ಞಾನಿಕ ಸರ್ವೆ ನಡೆಸುವಂತೆ ನಾಲ್ವರು ಮಹಿಳೆಯರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಜುಲೈ 14ರಂದೇ ಮುಕ್ತಾಯವಾಗಿತ್ತು. ಆದರೆ, ತೀರ್ಪನ್ನು ಜುಲೈ 21ಕ್ಕೆ ಕಾಯ್ದಿರಿಸಲಾಗಿತ್ತು.