ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾಕ್ ಮಹಿಳಾ ಕ್ರಿಕೆಟ್ ತಂಡದ ಸ್ಫೋಟಕ ಬ್ಯಾಟರ್ (Pakistani Cricketer) ಆಯೇಶಾ ನಸೀಮ್ ನಿವೃತ್ತಿ ಘೋಷಿಸಿದ್ದಾರೆ.
ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದ ಆಯೇಶಾ, ಮುಂದೆ ತಂಡ ನಾಯಕತ್ವ ವಹಿಸುವ ಭರವಸೆ ಮೂಡಿಸಿದ್ದರು. ಇದೀಗ ನಿವೃತ್ತಿ ಘೋಷಿಸಿ ನಿರಾಸೆ ಮೂಡಿಸಿದ್ದಾರೆ.
ನಸೀಮ್ ಅವರು ಇಸ್ಲಾಂ ಧರ್ಮದ ಪ್ರಕಾರ ತಮ್ಮ ಜೀವನವನ್ನು ನಡೆಸುವ ಕಾರಣದಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೇಳಲು ನಿರ್ಧರಿಸಿದ್ದಾರೆ. ನಾನು ಕ್ರಿಕೆಟ್ ಆಟ ತ್ಯಜಿಸುತ್ತಿದ್ದೇನೆ ಮತ್ತು ಇಸ್ಲಾಂ ಧರ್ಮದ ಪ್ರಕಾರ ನನ್ನ ಜೀವನವನ್ನು ನಡೆಸಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ.
18 ವರ್ಷದ ಪಾಕ್ ಮಹಿಳಾ ಆಟಗಾರ್ತಿ ಆಯೇಶಾ ನಸೀಮ್ ಈವರೆಗೆ ನಾಲ್ಕು ಏಕದಿನ, 30 T20 ಪಂದ್ಯಗಳನ್ನಾಡಿದ್ದಾರೆ. ಅಗ್ರ ಕ್ರಮಾಂಕದ ಬ್ಯಾಟರ್ ಆಗಿ ಟಿ20 ಕ್ರಿಕೆಟ್‌ನಲ್ಲಿ 18:45 ಸರಾಸರಿಯಲ್ಲಿ 369 ರನ್ ಗಳಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಕೇವಲ 33 ರನ್ ಗಳಿಸಿದ್ದಾರೆ.