ಹೊಸದಿಗಂತ ವರದಿ, ಕಲಬುರಗಿ:
ಮಿನಿ ಮಲೆನಾಡು ಎಂದೆ ಪ್ರಸಿದ್ಧ ಪಡೆದ ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ನದಿ, ಜಲಾಶಯ ಹಾಗೂ ಜಲಪಾತಗಳ ನೀರಿನ ಒಳಹರಿವು ಹೆಚ್ಚಳವಾಗಿದ್ದು, ಚಿಂಚೋಳಿ ತಾಲೂಕಿನ ಪ್ರಸಿದ್ಧ ಚಂದ್ರಂಪಳ್ಳಿ ಜಲಾಶಯದ ಒಳ ಹರಿವು ಹೆಚ್ಚಾಗಿದೆ ಎಂದು ಚಂದ್ರಂಪಳ್ಳಿ ಕ.ನೀ.ನಿ.ನಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಚೇತನ ಕಳಸ್ಕರ ತಿಳಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ವ್ಯಾಪಕ ಮಳೆಯಿಂದ ಜಲಾಶಯಕ್ಕೆ ನಿರಂತರ ಒಳಹರಿವು ಹೆಚ್ಚಾದ ಪರಿಣಾಮ ನೀರಿನ ಮಟ್ಟ ದ್ವಿಗುಣಗೊಂಡಿದೆ. ಆದರಿಂದ ಜಲಾಶಯವು ಯಾವುದೇ ಹಂತದಲ್ಲಿ ಭರ್ತಿಯಾಗುವ ಸಾಧ್ಯತೆ ಇದ್ದು, ಗರಿಷ್ಠ ಮಟ್ಟ ತಲುಪಿದ ಬಳಿಕ ಒಳಹರಿವಿನ ನೀರನ್ನು ಆಣೆಕಟ್ಟಿನ ಕೋಡಿಯ ಗೇಟ್ ಮೂಲಕ ನದಿಗೆ ಹರಿ ಬಿಡಲಾಗುವುದು ಎಂದು ತಿಳಿಸಿದ್ದಾರೆ.
ಹೀಗಾಗಿ, ಚಂದ್ರಂಪಳ್ಳಿ ಆಣೆಕಟ್ಟಿನ ನದಿ ಪಾತ್ರದ ರೈತರು, ಸಾರ್ವಜನಿಕರು, ಮೀನುಗಾರರು ಯಾವುದೇ ಕಾರಣಕ್ಕಾಗಿ ನದಿಗೆ ಇಳಿಯಬಾರದು. ನದಿ ತಟದಲ್ಲಿರುವ ಆಸ್ತಿಗಳನ್ನು ಸುರಕ್ಷಿತ ಸ್ಥಳ ಅಥವಾ ಸುರಕ್ಷಿತವಾಗಿ ನೋಡಿಕೊಳ್ಳಲು ಪ್ರಕಟಣೆಯಲ್ಲಿ ಕೋರಲಾಗಿದೆ.
ಶುಕ್ರವಾರ ಚಿಂಚೋಳಿ 65.8ಮೀಮಿ, ಕುಂಚಾವರಂ-80.2ಮೀಮಿ, ನಿಡಗುಂದಾ-62ಮೀಮಿ, ಚಿಮ್ಮನಚೋಡ-46.2ಮೀಮಿ, ಐನಾಪೂರ-80.2ಮೀಮಿ, ಸುಲೇಪೇಟ-42.8 ಮೀಮಿ ಮಳೆಯಾಗಿದೆ ಎಂದು ತಹಸೀಲ್ದಾರ್ ಕಚೇರಿಯಿಂದ ತಿಳಿದು ಬಂದಿದೆ.