Saturday, December 20, 2025

ಮಲಯಾಳಂ ಚಿತ್ರರಂಗದ ಖ್ಯಾತ ನಟ, ನಿರ್ದೇಶಕ ಶ್ರೀನಿವಾಸನ್ ವಿಧಿವಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಲಯಾಳಂ ಚಿತ್ರರಂಗದ ಹಿರಿಯ ನಟ, ಕಥೆಗಾರ ಹಾಗೂ ನಿರ್ದೇಶಕ ಶ್ರೀನಿವಾಸನ್ ಅವರು ಶನಿವಾರ ಬೆಳಿಗ್ಗೆ ನಿಧನರಾಗಿದ್ದಾರೆ. 69 ವರ್ಷದ ಶ್ರೀನಿವಾಸನ್ ಅವರು ತ್ರಿಪುನಿತುರ ತಾಲೂಕು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಅವರ ಅಗಲಿಕೆಯಿಂದ ಮಲಯಾಳಂ ಸಿನಿಮಾ ಲೋಕಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಪತ್ನಿ ವಿಮಲಾ ಹಾಗೂ ಪುತ್ರರಾದ ನಿರ್ದೇಶಕ ವಿನೀತ್ ಶ್ರೀನಿವಾಸನ್ ಮತ್ತು ನಟ ಧ್ಯಾನ್ ಶ್ರೀನಿವಾಸನ್ ಅವರನ್ನು ಅವರು ಅಗಲಿದ್ದಾರೆ. ನಟನಾ ಡಿಪ್ಲೊಮಾ ಮುಗಿಸಿ ಚಿತ್ರರಂಗ ಪ್ರವೇಶಿಸಿದ ಶ್ರೀನಿವಾಸನ್, ಪಿ.ಎ. ಬಕ್ಕರ್ ನಿರ್ದೇಶನದ ‘ಮಣಿಮುಳಕಂ’ ಚಿತ್ರದ ಮೂಲಕ ತಮ್ಮ ಸಿನಿ ಪಯಣ ಆರಂಭಿಸಿದ್ದರು.

ನಂತರ ನಟನೆಯ ಜೊತೆಗೆ ಕಥೆ, ಚಿತ್ರಕಥೆ ಮತ್ತು ನಿರ್ದೇಶನದಲ್ಲೂ ತಮ್ಮದೇ ಆದ ಗುರುತು ಮೂಡಿಸಿದರು. ‘ಒಡರುತಮ್ಮವ ಆಳರ್ಯುಮ್’ ಚಿತ್ರದ ಮೂಲಕ ಚಿತ್ರಕಥೆಗಾರರಾಗಿ ಹೆಸರು ಮಾಡಿದ ಅವರು, ‘ವಡಕ್ಕುನೋಕ್ಕಿಯಂತ್ರಂ’ ಹಾಗೂ ‘ಚಿಂತವಿಷ್ಟಯ ಶ್ಯಾಮಲ’ ಚಿತ್ರಗಳನ್ನು ನಿರ್ದೇಶಿಸಿದರು. ಸಾಮಾನ್ಯ ಮಲಯಾಳಿ ಬದುಕಿನ ಸಮಸ್ಯೆಗಳು, ರಾಜಕೀಯ ವ್ಯಂಗ್ಯ ಮತ್ತು ಕೌಟುಂಬಿಕ ಸಂಬಂಧಗಳು ಅವರ ಚಿತ್ರಗಳ ಕೇಂದ್ರಬಿಂದು ಆಗಿದ್ದವು.

error: Content is protected !!