ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಾಪಿಂಗ್ ಮಾಲ್‌ನಲ್ಲಿ ಬಿಸಿ ನೀರಿನ ಪೈಪ್ ಒಡೆದು ನಾಲ್ವರು ಸಾವನ್ನಪ್ಪಿರುವ ಘಟನೆ ಮಾಸ್ಕೋದಲ್ಲಿ ನಡೆದಿದೆ. ಈ ದುರಂತದಲ್ಲಿ 10 ಜನರು ಗಾಯಗೊಂಡಿದ್ದು, ಗಾಯಾಳುಗಳನ್ನು ಕೂಡಲೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಯಿತು. ಕಟ್ಟಡದ ತುಂಬೆಲ್ಲಾ ನೀರು ಮತ್ತು ಹಬೆ ಹೊರಬರುತ್ತಿರುವುದನ್ನು ವಿಡಿಯೋ ದೃಶ್ಯಾವಳಿಗಳು ತೋರಿಸಿವೆ.
ಕುದಿಯುವ ಬಿಸಿನೀರಿನ ಪೈಪ್ ಒಡೆದ ನಂತರ ತುರ್ತು ಸೇವೆಗಳ ವಾಹನಗಳು ಶಾಪಿಂಗ್ ಮಾಲ್‌ನತ್ತ ದೌಡಾಯಿಸಿವೆ. 2007 ರಲ್ಲಿ ನಿರ್ಮಿಸಲಾದ ಈ ಶಾಪಿಂಗ್ ಮಾಲ್ 150 ಕ್ಕೂ ಹೆಚ್ಚು ಅಂಗಡಿಗಳನ್ನು ಹೊಂದಿದೆ. ಗಾಯಾಳುಗಳಿಗೆ ವೈದ್ಯಕೀಯ ನೆರವು ನೀಡಲಾಗುತ್ತಿದೆ ಎಂದು ಸ್ಥಳೀಯ ಮೇಯರ್ ತಿಳಿಸಿದ್ದಾರೆ.