ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊರಿಯಾ ಓಪನ್ ಬ್ಯಾಡ್ಮಿಂಟನ್ 2023 ಪುರುಷರ ಡಬಲ್ಸ್ ಫೈನಲ್ ನಲ್ಲಿ ಇಂಡೋನೇಷ್ಯಾದ ಫಜರ್ ಅಲ್ಫಿಯಾನ್ ಮತ್ತು ಮುಹಮ್ಮದ್ ರಿಯಾನ್ ಆರ್ಡಿಯಾಂಟೊರನ್ನು ಸೋಲಿಸುವ ಮೂಲಕ ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆಗಳಾದ ಸಾತ್ವಿಕ್-ಚಿರಾಗ್ ಜೋಡಿ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿದ್ದಾರೆ.
ಅಂತಿಮ ಹಣಾಹಣಿಯಲ್ಲಿ 17-21, 21-13, 21-14 ಸೆಟ್ಗಳಿಂದ ಜಯ ಸಾಧಿಸುವ ಮೂಲಕ ಭಾರತೀಯ ಜೋಡಿ ಕಿರೀಟ ತಮ್ಮದಾಗಿಸಿಕೊಂಡರು.
ಇದಕ್ಕೂ ಮುನ್ನ ಥಾಯ್ಲೆಂಡ್ ಓಪನ್ 2019 ಮತ್ತು ಇಂಡಿಯಾ ಓಪನ್ 2022 ರ ಪ್ರಶಸ್ತಿಗಳನ್ನುಸಾತ್ವಿಕ್ ಮತ್ತು ಚಿರಾಗ್ ಗೆದ್ದಿದ್ದರು.