ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದೆರಡು ದಿನಗಳಿಂದ ಕರಾವಳಿ ಭಾಗದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.
ಅತ್ತ ಘಟ್ಟ ಪ್ರದೇಶದಲ್ಲಿಯು ಉತ್ತಮ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ನೇತ್ರಾವತಿ ತುಂಬಿ ಹರಿಯುತ್ತಿದೆ .ಸಂಜೆ ವೇಳೆಗೆ 7 ಮೀ.ಅಡಿ ಅಂತರದಲ್ಲಿ ನೀರು ಹರಿಯುತ್ತಿದ್ದು,ಅಪಾಯದ ಕರೆಗಂಟೆ ಬಾರಿಸುತ್ತಿದೆ.
ಇತ್ತ ನೇತ್ರಾವತಿ ನದಿಯ ನೀರು ತುಂಬಿ ಹರಿದು ತಗ್ಗುಪ್ರದೇಶವಾದ ಪಾಣೆಮಂಗಳೂರಿನ ಆಲಡ್ಕ ಮತ್ತು ಬಸ್ತಿಪಡ್ಪುವಿ ಮೊದಲಾದ ಕಡೆಗಳಲ್ಲಿ ರಸ್ತೆ,ಮನೆಗಳು ಜಲಾವೃತವಾಗಿದೆ.