ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಗರಿಕ ವಿಮಾನ ಅಪಘಾತಕ್ಕೀಡಾಗಿರುವ ಘಟನೆ ಪೋರ್ಟ್ ಸುಡಾನ್ನಲ್ಲಿ ನಡೆದಿದೆ. ಪತನಗೊಂಡ ನಾಗರಿಕ ವಿಮಾನದಲ್ಲಿ ನಾಲ್ವರು ಸೇನಾ ಸಿಬ್ಬಂದಿ ಸೇರಿದಂತೆ ಒಂಬತ್ತು ಜನರು ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಹೆಣ್ಣು ಮಗು ಬದುಕುಳಿದಿದೆ ಎಂದು ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ.
ಪೋರ್ಟ್ ಸುಡಾನ್ನ ವಿಮಾನ ನಿಲ್ದಾಣದಲ್ಲಿ ಟೊನೊವ್ ವಿಮಾನ ಟೇಕ್-ಆಫ್ ಆಗುವ ವೇಳೆ ತಾಂತ್ರಿಕ ದೋಷದಿಂದ ಪತನಗೊಂಡಿದೆ ಎಂದು ಸುಡಾನ್ ಸೇನೆಯ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ…
ಈ ನಡುವೆ ಏಪ್ರಿಲ್ 15 ರಿಂದ, ರಾಜಧಾನಿ ಖಾರ್ಟೂಮ್ ಮತ್ತು ಇತರ ಪ್ರದೇಶಗಳಲ್ಲಿ ಸುಡಾನ್ ಸೈನ್ಯ ಮತ್ತು ಅರೆಸೇನಾ ಕ್ಷಿಪ್ರ ಬೆಂಬಲ ಪಡೆಗಳ ನಡುವೆ ಘರ್ಷಣೆಗಳು ನಡೆಯುತ್ತಿವೆ.
ಪೋರ್ಟ್ ಸುಡಾನ್ ವಿಮಾನ ನಿಲ್ದಾಣ, ಖಾರ್ಟೂಮ್ನಿಂದ 890 ಕಿಮೀ ಪೂರ್ವಕ್ಕೆ, ಕಾದಾಡುತ್ತಿರುವ ಪಕ್ಷಗಳ ನಡುವಿನ ಸಶಸ್ತ್ರ ಘರ್ಷಣೆಯಿಂದಾಗಿ ಖಾರ್ಟೂಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಸಂಘರ್ಷ ಹಿನ್ನೆಲೆಯಲ್ಲಿ ನಂತರ ಪೋರ್ಟ್ ಸುಡಾನ್ ವಿಮಾನ ನಿಲ್ದಾಣವನ್ನು ದೇಶದ ಮುಖ್ಯ ವಿಮಾನ ನಿಲ್ದಾಣವಾಗಿ ಬಳಸಲಾಗುತ್ತಿದೆ.