ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶಾದ್ಯಂತ ಟೊಮ್ಯಾಟೊ ಬೆಲೆ ಗಗನಕ್ಕೇರಿದ್ದು, ಒಂದು ಕೆಜಿ ಕೊಳ್ಳೋ ಜಾಗದಲ್ಲಿ ಜನ ಅರ್ಧ ಕೆಜಿ ಕೊಂಡು ಸುಮ್ಮನಾಗ್ತಿದ್ದಾರೆ.
ಟೊಮ್ಯಾಟೊ ಬೆಲೆ ಕಡಿಮೆ ಆಗಬೇಕು ಅಂದ್ರೆ ಇರೋದು ಎರಡೇ ಮಾರ್ಗ, ಒಂದು ಟೊಮ್ಯಾಟೊವನ್ನು ಮನೆಯಲ್ಲಿ ನೀವೇ ಬೆಳೆಯಬೇಕು, ಇಲ್ಲವಾದ್ರೆ ಟೊಮ್ಯಾಟೊ ತಿನ್ನೋದನ್ನು ಬಿಡಬೇಕು ಎಂದು ಉತ್ತರ ಪ್ರದೇಶದ ಸಚಿವೆ ಪ್ರತುಭಾ ಶುಕ್ಲಾ ಸಲಹೆ ನೀಡಿದ್ದಾರೆ.
ನೀವು ಈ ಎರಡು ರೂಲ್ಸ್ ಫಾಲೋ ಮಾಡಿದ್ರೆ ಟೊಮ್ಯಾಟೊ ಬೆಲೆ ಅದಾಗಿಯೇ ಕಡಿಮೆ ಆಗುತ್ತದೆ. ಟೊಮ್ಯಾಟೊ ಬದಲು ನಿಂಬೆಹುಳಿ, ಹುಣಸೆಹುಳಿ ಬಳಸಬಹುದು. ದುಡ್ಡು ಕೂಡ ಉಳಿಯುತ್ತದೆ ಎಂದಿದ್ದಾರೆ.