ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟಿ ಮೌನಿ ರಾಯ್ ಅಭಿಮಾನಿಗಳಿಗೆ ಚಿರಪರಿಚಿತ. ಬಾಲಿವುಡ್ ನಲ್ಲಿ ಧಾರಾವಾಹಿ ಕಲಾವಿದೆಯಾಗಿ ವೃತ್ತಿ ಜೀವನ ಆರಂಭಿಸಿದ ಮೌನಿರಾಯ್ ನಾಗಿಣಿ ಧಾರಾವಾಹಿಯಿಂದ ಖ್ಯಾತಿ ಗಳಿಸಿದ್ದರು. ಅದರ ನಂತರ ಇತ್ತೀಚೆಗೆ ಬ್ರಹ್ಮಾಸ್ತ್ರ ಚಿತ್ರದಲ್ಲಿ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇತ್ತೀಚೆಗಷ್ಟೇ ಈ ನಟಿ ಅನುಭವಿಸಿದ ನೋವನ್ನು ತಮ್ಮ ಇನ್ಸ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಆಸ್ಪತ್ರೆಯ ಬೆಡ್ ಮೇಲಿಂದ ಪತಿಯ ಕೈ ಹಿಡಿದಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಆ ಫೋಟೋದಲ್ಲಿ ಮೌನಿ ರಾಯ್ ಕೈಗೆ ಡ್ರಿಪ್ ಹಾಕಿರುವುದು ಕಂಡುಬಂದಿದೆ. ನಾನು 9 ದಿನ ಆಸ್ಪತ್ರೆಯಲ್ಲಿದ್ದೆ, ಇಂದು ಡಿಸ್ಚಾರ್ಜ್ ಆಗಿದ್ದೇನೆ. ಅಲ್ಲಿದಷ್ಟೂ ದಿನ ಸಾಕಷ್ಟು ನೋವನ್ನನುಭವಿಸಿದ್ದೇನೆ. ಸದ್ಯ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ಇಷ್ಟು ದಿನ ನನ್ನನ್ನು ನೋಡಿಕೊಂಡ ಆಸ್ಪತ್ರೆ ಸಿಬ್ಬಂದಿಗೆ ವಿಶೇಷ ಧನ್ಯವಾದಗಳು ಎಂದರು. ನನ್ನ ಚಿಕಿತ್ಸೆಯ ಸಮಯದಲ್ಲಿ ನನ್ನ ಪತಿ ತುಂಬಾ ಬೆಂಬಲ ನೀಡಿದರು. ಜೀವನ ಪರ್ಯಂತ ಅವರಿಗೆ ಋಣಿಯಾಗಿರುತ್ತೇನೆ ಎಂದು ಭಾವನಾತ್ಮಕ ಪೋಸ್ಟ್ ಮಾಡಿದ್ದಾರೆ.
ಇಷ್ಟೆಲ್ಲಾ ಪೋಸ್ಟ್ ಮಾಡಿದ ನಂತರ ಅಭಿಮಾನಿಗಳು ಮತ್ತು ಅನೇಕ ನೆಟ್ಟಿಗರು ಮೌನಿರಾಯ್ಗೆ ಏನಾಯಿತು ಎಂದು ಕಮೆಂಟ್ ಮಾಡುತ್ತಿದ್ದಾರೆ. ಮತ್ತು ಮೌನಿರಾಯ್ ಯಾವ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗಿದ್ದಾರೆ ಎಂಬುದು ತಿಳಿಯಬೇಕಿದೆ.