Saturday, December 20, 2025

FOOD | ಅಬ್ಬಬ್ಬಾ! ಎಂತಹ ರುಚಿ ಗೊತ್ತಾ ಈ ಈರುಳ್ಳಿ ಕುರ್ಮಾ: ನೀವೂ ಒಮ್ಮೆ ಟ್ರೈ ಮಾಡಿ

ಸಾಧಾರಣ ಈರುಳ್ಳಿಯಿಂದಲೂ ಎಷ್ಟು ರುಚಿಯಾದ ಅಡುಗೆ ಮಾಡಬಹುದು ಅನ್ನೋದಕ್ಕೆ ಈರುಳ್ಳಿ ಕುರ್ಮಾ ಉತ್ತಮ ಉದಾಹರಣೆ. ಮಸಾಲೆಗಳ ಅದ್ಭುತ ರುಚಿಯೊಂದಿಗೆ ತಯಾರಾಗುವ ಈ ಕುರ್ಮಾ ಚಪಾತಿ, ಪೂರಿ, ಪರೋಟಾ ಅಥವಾ ಅನ್ನದ ಜೊತೆ ತುಂಬಾ ಚೆನ್ನಾಗಿ ಹೊಂದುತ್ತದೆ.

ಬೇಕಾಗುವ ಸಾಮಗ್ರಿಗಳು

ಈರುಳ್ಳಿ – 3
ಎಣ್ಣೆ – 2 ಟೇಬಲ್ ಸ್ಪೂನ್
ಜೀರಿಗೆ – 1 ಟೀ ಸ್ಪೂನ್
ಲವಂಗ – 2
ಏಲಕ್ಕಿ – 2
ದಾಲ್ಚಿನ್ನಿ – 1 ಚಿಕ್ಕ ತುಂಡು
ಹಸಿಮೆಣಸು – 2
ಶುಂಠಿ – 1 ಇಂಚು
ಬೆಳ್ಳುಳ್ಳಿ – 4 ಕಾಯಿ
ಕೊಬ್ಬರಿ ತುರಿ – ½ ಕಪ್
ಗಸಗಸೆ – 1 ಟೀ ಸ್ಪೂನ್
ಕಾಜು – 8–10
ಅರಿಶಿನ ಪುಡಿ – ¼ ಟೀ ಸ್ಪೂನ್
ಧನಿಯಾ ಪುಡಿ – 1 ಟೀ ಸ್ಪೂನ್
ಗರಂ ಮಸಾಲಾ – ½ ಟೀ ಸ್ಪೂನ್
ಉಪ್ಪು – ರುಚಿಗೆ
ನೀರು – ಅಗತ್ಯಕ್ಕೆ
ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ

ಮಾಡುವ ವಿಧಾನ

ಮೊದಲು ಮಿಕ್ಸಿಯಲ್ಲಿ ಕೊಬ್ಬರಿ ತುರಿ, ಗಸಗಸೆ, ಕಾಜು, ಹಸಿಮೆಣಸು, ಶುಂಠಿ ಮತ್ತು ಬೆಳ್ಳುಳ್ಳಿಯನ್ನು ಹಾಕಿ ಮೃದುವಾಗಿ ಪೇಸ್ಟ್ ಮಾಡಿ ಇಟ್ಟುಕೊಳ್ಳಿ.

ಒಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ ಜೀರಿಗೆ, ಲವಂಗ, ಏಲಕ್ಕಿ ಮತ್ತು ದಾಲ್ಚಿನ್ನಿ ಹಾಕಿ ಹುರಿಯಿರಿ. ನಂತರ ಸ್ಲೈಸ್ ಮಾಡಿದ ಈರುಳ್ಳಿಯನ್ನು ಹಾಕಿ ಸ್ವಲ್ಪ ಕಂದು ಬಣ್ಣ ಬರುವವರೆಗೂ ಹುರಿಯಿರಿ. ಈಗ ತಯಾರಿಸಿದ ಪೇಸ್ಟ್ ಸೇರಿಸಿ ಹಸಿ ವಾಸನೆ ಹೋಗುವವರೆಗೂ ಚೆನ್ನಾಗಿ ಹುರಿಯಿರಿ. ನಂತರೆ ಅರಿಶಿನ, ಧನಿಯಾ ಪುಡಿ, ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಅಗತ್ಯಕ್ಕೆ ನೀರು ಹಾಕಿ ಮಧ್ಯಮ ಉರಿಯಲ್ಲಿ 5–7 ನಿಮಿಷ ಕುದಿಯಲು ಬಿಡಿ. ಕೊನೆಯಲ್ಲಿ ಗರಂ ಮಸಾಲಾ ಹಾಕಿ, ಮೇಲಿಂದ ಕೊತ್ತಂಬರಿ ಸೊಪ್ಪು ಹಾಕಿ ಬಿಸಿ ಬಿಸಿಯಾಗಿ ಸರ್ವ್ ಮಾಡಿ.

error: Content is protected !!