7.4 ಕೋಟಿ ‘ITR’ ಸಲ್ಲಿಕೆ, 5.16 ಕೋಟಿಗೂ ಹೆಚ್ಚು ಜನರು ಶೂನ್ಯ ತೆರಿಗೆದಾರರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಜು. 31 2023-24ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್‌ ಅನ್ನು ಸಲ್ಲಿಸಲು ಕೊನೆಯ ದಿನವಾಗಿದ್ದು, ಹೀಗಾಗಿ ಈವರೆಗೂ ಸಂಸ್ಥೆ ಹಾಗೂ ವೈಯಕ್ತಿಕವಾಗಿ 7.4 ಕೋಟಿ ಜನ ರಿಟರ್ನ್ಸ್‌ ಸಲ್ಲಿಸಿದ್ದಾರೆ. ಇದು ಕಳೆದ ಸಾಲಿಗೆ ಹೋಲಿಸಿದಲ್ಲಿ ಶೇ 6.18ರಷ್ಟು ಅಧಿಕವಾಗಿದೆ’ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಗೆ ಸೋಮವಾರ ಮಾಹಿತಿ ನೀಡಿದ್ದಾರೆ.

ಕಳೆದ ವರ್ಷ ಒಟ್ಟು 7.4 ಕೋಟಿ ಜನ ರಿಟರ್ನ್ಸ್‌ ಸಲ್ಲಿಸಿದ್ದರು. ಈ ಬಾರಿ ಇಲ್ಲಿಯವರೆಗೆ ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಸಿದವರಲ್ಲಿ 5.16 ಕೋಟಿಯಷ್ಟು ಜನ ಶೂನ್ಯ ಆದಾಯ ತೆರಿಗೆದಾರರು ಎಂದು ಘೋಷಿಸಿಕೊಂಡಿದ್ದಾರೆ’ ಎಂದಿದ್ದಾರೆ.

ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದಲ್ಲಿ ಶೇ 20.33ರಷ್ಟು ನೇರ ತೆರಿಗೆ ಸಂಗ್ರಹ ಹೆಚ್ಚಾಗಿದೆ. ಕಳೆದ ವರ್ಷದ ₹19.68 ಲಕ್ಷ ಕೋಟಿಯಷ್ಟಿತ್ತು. 2021-22ರಲ್ಲಿ 6.94 ಕೋಟಿಯಷ್ಟು ಜನ ಐಟಿ ರಿಟರ್ನ್ಸ್‌ ಸಲ್ಲಿಸಿದ್ದರು.ಆ ಕ್ಷಣ 5.05 ಕೋಟಿಯಷ್ಟು ಜನ ಶೂನ್ಯ ತೆರಿಗೆದಾರರಾಗಿದ್ದರು. 2020-21ರಲ್ಲಿ 6.72ಕೋಟಿ, 2019-20ರಲ್ಲಿ 6.47 ಕೋಟಿಯಷ್ಟು ಮಂದಿ ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಸಿದ್ದರು.ಶೂನ್ಯ ತೆರಿಗೆದಾರರ ಸಂಖ್ಯೆ ಕ್ರಮವಾಗಿ 4.84 ಕೋಟಿ ಹಾಗೂ 2.9 ಕೋಟಿಯಷ್ಟಿತ್ತು’ ಎಂದಿದ್ದಾರೆ.

ಅದೇ ರೀತಿ ಕೇಂದ್ರ ಸರಕಾರ ಟಿಡಿಎಸ್‌ ಸರಳಗೊಳಿಸಲು ಹಲವು ಸುಧಾರಣಾ ಕ್ರಮಗಳನ್ನು ಕೈಗೊಂಡಿತ್ತು. ಹೊಸ 26 ಎಎಸ್‌ ಅರ್ಜಿ ಹಾಗೂ ಅರ್ಜಿ ಸಲ್ಲಿಸಿದವರ ಮೇಲೆ ನಿಗಾ ವ್ಯವಸ್ಥೆಯೂ ಐಟಿ ರಿಟರ್ನ್ಸ್ ಸಲ್ಲಿಸುವವರ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ. ಇದರೊಂದಿಗೆ ಇ-ಮೇಲ್ ಹಾಗೂ ಎಸ್‌ಎಂಎಸ್‌ ಮೂಲಕವೂ ಆದಾಯ ತೆರಿಗೆ ಸಲ್ಲಿಸುವವರಿಗೆ ಮಾಹಿತಿ ನೀಡಲಾಗುತ್ತಿತ್ತು. ಜತೆಗೆ ಸಾರ್ವಜನಿಕವಾಗಿ ಜಾಗೃತಿ ಅಭಿಯಾನವನ್ನೂ ಆದಾಯ ತೆರಿಗೆ ಇಲಾಖೆ ಕೈಗೊಂಡಿತ್ತು’ ಎಂದು ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!