ಮಿಸ್ಟರ್ ಮೋದಿ ನಮ್ಮನ್ನು ನೀವು ಏನು ಬೇಕಾದರೂ ಕರೆಯಬಹುದು: ರಾಹುಲ್ ಗಾಂಧಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಿಜೆಪಿ ಸಂಸದರ ಸಭೆಯಲ್ಲಿ ಪ್ರಧಾನಿ ಮೋದಿ ಇಂದು ಪ್ರತಿಪಕ್ಷಗಳ “ಇಂಡಿಯಾ” ಮೈತ್ರಿಕೂಟದ ಬಗ್ಗೆ ಟೀಕಿಸಿದ್ದಾರೆ.

ಇದೀಗ ಇದಕ್ಕೆ ರಾಹುಲ್​​ ಗಾಂಧಿ (Rahul Gandhi) ಟ್ವೀಟ್​​ ಮೂಲಕ ತಿರುಗೇಟು ನೀಡಿದ್ದು, ನಮ್ಮ ಮುಖ್ಯ ಉದ್ದೇಶ ಮಣಿಪುರದಲ್ಲಿ ಶಾಂತಿ ಕಾಪಾಡುವುದು, ಅಲ್ಲಿಯ ಜನರಿಗೆ ಸಹಾಯ ಮಾಡುವುದು ನಮ್ಮ ಮುಖ್ಯ ಗುರಿ. ಈಶಾನ್ಯ ರಾಜ್ಯದಲ್ಲಿ ಮತ್ತೆ ಭಾರತದ ಪರಿಕಲ್ಪನೆಯನ್ನು ಪುನರ್ನಿರ್ಮಿಸುತ್ತೇವೆ ಎಂದು ತಿಳಿಸಿದ್ದಾರೆ.

‘ಮಿಸ್ಟರ್ ಮೋದಿ ನಮ್ಮನ್ನು ನೀವು ಏನು ಬೇಕಾದರೂ ಕರೆಯಬಹುದು. ನಾವು ಎಂದಿಗೂ INDIA. ಮಣಿಪುರವನ್ನು ಮತ್ತೆ ಮೊದಲಿನ ಸ್ಥಿತಿಗೆ ತರವುದು ನಮ್ಮ ಗುರಿ. ಅಲ್ಲಿಯ ಮಕ್ಕಳು ಮತ್ತು ಮಹಿಳೆಯರ ಕಣ್ಣೀರನ್ನು ಒರೆಸಲು ಸಹಾಯ ಮಾಡುತ್ತೇವೆ. ಎಲ್ಲ ಜನರಿಗೂ ನಾವು ಪ್ರೀತಿ ಮತ್ತು ಶಾಂತಿಯನ್ನು ಮತ್ತೆ ನೀಡುತ್ತೇವೆ. ಮಣಿಪುರದಲ್ಲಿ ಮತ್ತೆ ಭಾರತದ ಕಲ್ಪನೆಯನ್ನು ಮರುನಿರ್ಮಾಣ ಮಾಡುತ್ತೇವೆ” ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!