ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಡ್ಗಿಚ್ಚು ನಂದಿಸುವ ಯತ್ನದಲ್ಲಿ ಅಗ್ನಿಶಾಮಕ ವಿಮಾನವೊಂದು ಪತನಗೊಂಡು ಇಬ್ಬರು ಪೈಲಟ್‌ಗಳು ಸಾವನ್ನಪ್ಪಿರುವ ಘಟನೆ ಗ್ರೀಕ್‌ನಲ್ಲಿ ನಡೆದಿದೆ. ಸಿಡಿಆರ್ ಕ್ರಿಸ್ಟೋಸ್ ಮೌಲಾಸ್ ಮತ್ತು ಅವರ ಸಹ-ಪೈಲಟ್ ಪೆರಿಕಲ್ಸ್ ಸ್ಟೆಫಾನಿಡಿಸ್ ಅಪಘಾತದಲ್ಲಿ ಸಾವನ್ನಪ್ಪಿದ ಪೈಲೆಟ್‌ಗಳಾಗಿದ್ದಾರೆ.
ಗ್ರೀಕ್ ದ್ವೀಪವಾದ ಎವಿಯಾದಲ್ಲಿ ಕಾಡ್ಗಿಚ್ಚಿನ ವಿರುದ್ಧ ಹೋರಾಡುತ್ತಿದ್ದ ವಿಮಾನ ಪತನಗೊಂಡಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಕೆನಡೈರ್ ವಿಮಾನವು ಕಾಡಿನ ಬೆಂಕಿಯನ್ನು ನಂದಿಸಲು ಕಡಿಮೆ ಎತ್ತರದಲ್ಲಿ ಹಾರುತ್ತಿರುವಾಗ ಅಪಘಾತಕ್ಕೀಡಾಯಿತು. ಬೆಂಕಿಯ ಅಪಾಯದ ಬಗ್ಗೆ ನಿವಾಸಿಗಳು ಎಚ್ಚರಿಕೆ ನೀಡಿದ್ದರಿಂದ ಗ್ರೀಕ್ ದ್ವೀಪವಾದ ಕ್ರೀಟ್ ಅನ್ನು ಹೈ ಅಲರ್ಟ್ ಮಾಡಲಾಗಿದೆ.
ಸ್ಥಳೀಯ ಜನರನ್ನು ಸ್ಥಳಾಂತರ ಮಾಡಲಾಗಿದೆ.