ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಪಘಾತ ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡ ಬಸ್ಸೊಂದು ರಸ್ತೆ ಬಿಟ್ಟು ಗದ್ದೆಗೆ ನುಗ್ಗಿ ಆತಂಕ ಹುಟ್ಟಿಸಿದ ಘಟನೆ ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯ ಕೊಮರೋಳು ಪೇಟೆ ಎಂಬಲ್ಲಿ ನಡೆದಿದೆ.
ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಜೀವಾಪಾಯ ಸಂಭವಿಸಿಲ್ಲ.
ಪ್ರವಾಸಿಗರಿದ್ದ ಈ ಬಸ್ ಮಧ್ಯಪ್ರದೇಶದಿಂದ ತಿರುಮಲಕ್ಕೆ ತೆರಳುತ್ತಿತ್ತು. ಕೊಮರೋಲು ಬಳಿ ತಲುಪುತ್ತಿದ್ದಂತೆಯೇ ಎದುರಿನಿಂದ ಬರುತ್ತಿದ್ದ ವಾಹನವೊಂದಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸುವ ಭರದಲ್ಲಿ ಬಸ್ ಚಾಲಕನ ನಿಯಂತ್ರಣ ಕಳೆದುಕೊಂಡಿದ್ದು ನೇರ ಪಕ್ಕದ ಗದ್ದೆಯೊಳಕ್ಕೆ ನುಗ್ಗಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಘಟನೆಯಲ್ಲಿ ಬಸ್ ಗೆ ಹಾನಿಯಾಗಿದ್ದು, ಇದರಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಈ ಬಸ್ ನಲ್ಲಿ 60 ಮಂದಿ ಪ್ರಯಾಣಿಕರಿದ್ದರು.