BREAKFAST| ಉಪ್ಪಿಟ್ಟು ಬೇಡ ಅನ್ನೋರು ತಿಂದು ನೋಡಿ ರವೆ ಪೊಂಗಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಅನೇಕ ಮಂದಿ ಉಪ್ಪಿಟ್ಟು ತಿನ್ನೋಕೆ ಇಷ್ಟ ಪಡೋದಿಲ್ಲ, ಅಂತವರು ಒಮ್ಮೆ ಟ್ರೈ ಮಾಡಿ ರವೆ ಪೊಂಗಲ್.‌

ಬೇಕಾಗುವ ಸಾಮಾಗ್ರಿಗಳು:

* ರವೆ (ಹುರಿದಿಟ್ಟುಕೊಳ್ಳಿ)
* ಹೆಸರುಕಾಳು
* ತುಪ್ಪ
* ಕರಿಮೆಣಸು
* ಜೀರಿಗೆ
* ಗೋಡಂಬಿ
* ಕರಿಬೇವು
* ಶುಂಠಿ
* ನೀರು

ಮಾಡುವ ವಿಧಾನ:

* ಮೊದಲಿಗೆ ಹೆಸರುಬೇಳೆಯನ್ನು ಕುಕ್ಕರಿನಲ್ಲಿ ಬೇಯಿಸಿಕೊಳ್ಳಿ.
* ರವೆಯನ್ನು ಹುರಿದುಕೊಳ್ಳಿ.
* ನಂತರ ಬಾಣಲೆಯಲ್ಲಿ ತುಪ್ಪ ಹಾಕಿ ಕಾಯಿಸಿ ಮೆಣಸು ಮತ್ತು ಗೋಡಂಬಿಯನ್ನು ಹಾಕಿ ಕೆಂಪಾಗುವವರೆಗೆ ಹುರಿಯಿರಿ. ನಂತರ ಅದಕ್ಕೆ ಜೀರಿಗೆ ಸೇರಿಸಿ. ಅದಕ್ಕೆ 3 ಕಪ್ ನೀರು ಹಾಕಿ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುದಿಯಲು ಬಿಡಿ.
* ನೀರು ಕುದಿ ಬಂದಾಗ ಅದಕ್ಕೆ ಹುರಿದಿಟ್ಟ ರವೆ ಸೇರಿಸಿ ಬೇಯಿಸಿ.
* ರವೆ ಬೇಯಲು ಆರಂಭವಾದ ತಕ್ಷಣ ಬೇಯಿಸಿಕೊಂಡ ಹೆಸರು ಬೇಳೆ ಸೇರಿಸಿ. ಇದನ್ನು ಒಂದು ಹದಕ್ಕೆ ಬರುವವರೆಗೆ ಕಲಸಿ. ಸಿದ್ಧವಾದ ನಂತರ ಅದಕ್ಕೆ ಕರಿಬೇವಿನ ಎಲೆ ಮತ್ತು ತುಪ್ಪವನ್ನು ಸೇರಿಸಬಹುದು.

ಇದೀಗ ಬಿಸಿ ಬಿಸಿಯಾದ ರವೆ ಪೊಂಗಲ್‌ ಸವಿಯಲು ಸಿದ್ದ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!