ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಿವಮೊಗ್ಗದಲ್ಲಿ ಎಟಿಎಂ ಕಳ್ಳತನ ಮಾಡೋದಕ್ಕೆ ಕಳ್ಳರು ಜೆಸಿಬಿ ತಂದಿದ್ದಾರೆ.
ಸಾಮಾನ್ಯವಾಗಿ ಕಳ್ಳತನ ಮಾಡುವವರು ಕಳ್ಳ ಬೆಕ್ಕಿನಂತೆ ಸದ್ದಿಲ್ಲದೆ ಹೆಜ್ಜೆ ಇಟ್ಟು ಕಳ್ಳತನ ಮಾಡುತ್ತಾರೆ. ಆದರೆ ಶಿವಮೊಗ್ಗದ ವಿನೋಬನಗರದಲ್ಲಿ ಜೆಸಿಬಿ ಬಳಸಿ ದೊಡ್ಡ ಶಬ್ದ ಮಾಡಿ ಕಳ್ಳತನ ಮಾಡಿದ್ದಾರೆ.
ಆಕ್ಸಿಸ್ ಬ್ಯಾಂಕ್‌ನ ಎಟಿಎಂ ದರೋಡೆಗೆ ಯತ್ನಿಸಿದ್ದು, ಶಬ್ದ ಕೇಳಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಳ್ಳರು ಓಡಿಹೋಗಿದ್ದಾರೆ.