ಹೊಸದಿಗಂತ ವರದಿ ಬಳ್ಳಾರಿ:
ತಾಲೂಕಿನ ಕೊಳಗಲ್ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಉಳ್ಳೂರು ಗಾದಿಲಿಂಗ ಹಾಗೂ ಉಪಾಧ್ಯಕ್ಷರಾಗಿ ಜಿ.ಶಾಂತಮ್ಮ ಅವರು ಆಯ್ಕೆಯಾಗಿದರು. ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಸದಸ್ಯರು, ಬಿಜೆಪಿ ಪ್ರಮುಖರು, ಗ್ರಾಮದ ಗುರು ಹಿರಿಯರು ಹೂಗುಚ್ಛ ನೀಡಿ ಶುಭಾಷಯಗಳನ್ನು ತಿಳಿಸಿದರು.
ನಂತರ ಅಹಂಬಾವಿ ಪ್ರದೇಶದ ಮಾಜಿ ಸಚಿವ ಬಿ.ಶ್ರೀರಾಮುಲು ಅವರ ನಿವಾಸಕ್ಕೆ ಭೇಟಿ ನೀಡಿ, ಗ್ರಾ.ಪಂ.ವ್ಯಾಪ್ತಿಯ ಎಲ್ಲ ಗ್ರಾಮಗಳ ಅಭಿವೃದ್ಧಿ ಕುರಿತು ಮಾಜಿ ಸಚಿವ ಬಿ.ಶ್ರೀರಾಮುಲು ಅವರೊಂದಿಗೆ ಚರ್ಚಿಸಿದರು. ಈ ವೇಳೆ ಮಾಜಿ ಸಚಿವರು ನೂತನ ಅಧ್ಯಕ್ಷ ಹಾಗು ಉಪಾಧ್ಯಕ್ಷರಿಗೆ ಶುಭಾಷಯಗಳನ್ನು ತಿಳಿಸಿ, ಅಭಿನಂದಿಸಿದರು.
ನಂತರ ನಡೆದ ಸರಳ ಸಮಾರಂಭದಲ್ಲಿ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕೊಳಗಲ್ ಗ್ರಾಮದ ಪ್ರಮುಖರು, ಬಿಜೆಪಿ ವಿವಿಧ ಮುಖಂಡರು, ಗ್ರಾ.ಪಂ.ಸದಸ್ಯರು ಇತರರು ಉಪಸ್ಥಿತರಿದ್ದರು.