ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಣಿಪುರದಲ್ಲಿ ಹಿಂಸಾಚಾರ ಕಡಿಮೆಯಾಗುತ್ತಿದ್ದೆ ಎನ್ನುವಾಗ ಮತ್ತೆ ಸುಮಾರು 2,000 ಜನರ ಗುಂಪೊಂ ಭಾರತ-ಮ್ಯಾನ್ಮಾರ್ ಗಡಿ ಪಟ್ಟಣವಾದ ಮೊರೆಹ್ನಲ್ಲಿ ಸುಮಾರು 30 ಮನೆಗಳನ್ನು ಸುಟ್ಟುಹಾಕಿದೆ ಮತ್ತು ಇತರ ನಾಲ್ಕು ಮನೆಗಳನ್ನು ಕೆಡವಿದೆ.
ಮೊರೆಹ್ ಬಜಾರ್ ಪ್ರದೇಶದಲ್ಲಿ ಈ ಗುಂಪು ದಾಳಿ ನಡೆಸಿದ್ದಾರೆ.
ಮೊರೆಹ್ ವಿವಿಧ ಸಮುದಾಯಗಳ ಜನಸಂಖ್ಯೆಯನ್ನು ಹೊಂದಿದ್ದು, ಕುಕಿಗಳು, ಮೇಟಿಗಳು, ತಮಿಳರು, ಗೂರ್ಖಾಗಳು, ಬೆಂಗಾಲಿಗಳು, ಪಂಜಾಬಿ ಸೇರಿದಂತೆ ಇತರೆ ಸಮುದಾಯಗಳು ವಾಸವಾಗಿವೆ. ಇಲ್ಲಿನ ಆದಿವಾಸಿಗಳಲ್ಲದವರು ಹೆಚ್ಚಾಗಿ ವ್ಯಾಪಾರಿಗಳಾಗಿದ್ದು, ಅವರು ಹೆಚ್ಚಾಗಿ ಮ್ಯಾನ್ಮಾರ್ನ ಗ್ರಾಹಕರನ್ನು ಅವಲಂಬಿಸಿದ್ದಾರೆ. ಆದಾಗ್ಯೂ, ಈಗ ಅವರ ಪ್ರವೇಶವನ್ನು ನಿರ್ಬಂಧಿಸಲಾಗಿದ್ದು, ವ್ಯಾಪಾರದ ಮೇಲೆ ತೀವ್ರ ಹೊಡೆತ ಬಿದ್ದಿದೆ. ಬಿಷ್ಣುಪುರ್-ಚುರಚಂದ್ಪುರ ಜಿಲ್ಲೆಗಳ ಗಡಿಗೆ ಸಮೀಪವಿರುವ ಸ್ಥಳದಲ್ಲಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರಿಂದ ಇಬ್ಬರು ರೈತರು ಗಾಯಗೊಂಡ ಒಂದು ದಿನದ ನಂತರ ಈ ಘಟನೆ ನಡೆದಿದೆ.
ಇತ್ತ ಇನ್ನೊಂದೆಡೆ, ಸಿಬ್ಬಂದಿಯನ್ನು ಸಾಗಿಸಲು ಭದ್ರತಾ ಪಡೆಗಳು ಬಳಸುತ್ತಿದ್ದ ಎರಡು ಬಸ್ಗಳಿಗೆ ಕಾಂಗ್ಪೋಕ್ಪಿ ಜಿಲ್ಲೆಯಲ್ಲಿ ಜನರ ಗುಂಪೊಂದು ಬೆಂಕಿ ಹಚ್ಚಿದ ಗಂಟೆಗಳ ನಂತರ ಮನೆಗಳಿಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ.
ಮಂಗಳವಾರ ಸಂಜೆ ದಿಮಾಪುರದಿಂದ ಬಸ್ಸುಗಳು ಬರುತ್ತಿದ್ದಾಗ ಸಪೋರ್ಮಿನಾದಲ್ಲಿ ಈ ಘಟನೆ ಸಂಭವಿಸಿದೆ. ಮಣಿಪುರ ನೋಂದಣಿ ಸಂಖ್ಯೆಗಳನ್ನು ಹೊಂದಿರುವ ಬಸ್ಗಳನ್ನು ಸಪೋರ್ಮಿನಾದಲ್ಲಿ ನಿಲ್ಲಿಸಿದ ಸ್ಥಳೀಯರು, ಯಾವುದೇ ಸಮುದಾಯದ ಸದಸ್ಯರು ಬಸ್ಸಿನಲ್ಲಿದ್ದರೆ ಅದನ್ನು ಪರಿಶೀಲಿಸುವುದಾಗಿ ಒತ್ತಾಯಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.