INDIA ಪವಿತ್ರ ಹೆಸರಲ್ಲ ಅಂದವರ್ಯಾರು?: ಸಿದ್ದರಾಮಯ್ಯ ಮಾತಿಗೆ ತಿರುಗೇಟು ಕೊಟ್ಟ ಬಿ.ವೈ. ರಾಘವೇಂದ್ರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

INDIA ಹೆಸರ ಕುರಿತ ಪ್ರಧಾನಿ ಮೋದಿ ಮಾತನ್ನು ಟೀಕಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ತಿರುಗೇಟು ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರೇ, ಇಂಡಿಯಾ ಎಂಬ ಸುಂದರ, ಸುಮಧುರ ಮತ್ತು ಪವಿತ್ರ ಹೆಸರಿನ ಬಗ್ಗೆ ನಿಮಗೆ ಯಾಕೆ ಇಷ್ಟೊಂದು ದ್ವೇಷ?ಪ್ರಶ್ನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಗೆ ಉತ್ತರಕೊಟ್ಟ ಅವರು, ಸಿದ್ದರಾಮಯ್ಯ ಅವರೇ ಇಂಡಿಯಾ ಎಂಬುದು ಪವಿತ್ರ ಹೆಸರಲ್ಲ ಅಂದವರ್ಯಾರು? ಎಂದು ಪ್ರಶ್ನಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಸಿದ್ದರಾಮಯ್ಯ ಅವರೇ,ಇಂಡಿಯಾ ಎಂಬುದು ಪವಿತ್ರ ಹೆಸರಲ್ಲ ಅಂದವರ್ಯಾರು? ಪಾಶ್ಚಾತ್ಯರಿಂದ ಪಡೆದುಕೊಂಡ ಇಂಡಿಯಾ ಎಂಬ ಹೆಸರನ್ನೂ ತನ್ನ ಅಂತಃಶಕ್ತಿಯಿಂದ ಪವಿತ್ರ ಮಾಡಿಕೊಂಡಿರುವ ಪುಣ್ಯಭೂಮಿ ಭಾರತ. ಆಧುನಿಕ ಇಂಡಿಯಾದಲ್ಲಿ ಈ ಪಾರಂಪರಿಕ ಶ್ರೀಮಂತಿಕೆಯ ಭಾರತವನ್ನು ಸೇರಿಸಿ ದೇಶಕಟ್ಟುವ ಕೆಲಸ ನಮ್ಮ ಪ್ರಧಾನಿ ಮಾಡುತ್ತಿದ್ದಾರೆ.

ಭಾರತೀಯರನ್ನು ಭಾರತೀಯರ ವಿರುದ್ಧವೇ ಎತ್ತಿಕಟ್ಟಿ ದೇಶ ಲೂಟಿ ಹೊಡೆದ ಬ್ರಿಟಿಷರಂತೆಯೇ ಇಂಡಿಯನ್ ಮುಜಾಹಿದೀನ್-ಪಿಎಫ್ಐನಂಥ ಮತೀಯವಾದಿಗಳನ್ನು ಮುದ್ದಿಸಿ ಬೆಳೆಸಿ ದೇಶದ ಐಕ್ಯತೆಗೆ ಕೊಳ್ಳಿಯಿಟ್ಟ ಪಕ್ಷ ಇವತ್ತು ಇಂಡಿಯಾದ ಪವಿತ್ರ ಹೆಸರನ್ನು ಸ್ವಾರ್ಥಕ್ಕೆ ಬಳಸಿಕೊಳ್ಳಲು ಹೊರಟಿದೆ. ಇದು ಈಸ್ಟ್ ಇಂಡಿಯಾ ಕಂಪನಿಯಂಥದ್ದೇ ಹುನ್ನಾರವಲ್ಲದೆ ಇನ್ನೇನು? ಎಂದು ಪ್ರಶ್ನಿಸಿದ್ದಾರೆ.

ಮಾತು ಮುಂದುವರಿಸಿ, ಮೇಕ್ ಇನ್ ಇಂಡಿಯಾ -ಸ್ಟಾರ್ಟ್ ಅಪ್ ಇಂಡಿಯಾಗಳು ದೇಶಪ್ರೇಮದಲ್ಲಿ ಹುಟ್ಟಿದ ಯೋಜನೆಗಳು. ನಿಮ್ಮದು, ಇಂಡಿಯಾ ಎಂಬ ಹೆಸರನ್ನು ಸ್ವಾರ್ಥ ಸಾಧನೆಗಾಗಿ ಬಳಸಿಕೊಳ್ಳುತ್ತಿರುವ ಕೂಟ ಎಂದು ತಿರುಗೇಟು ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!