ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರಾವಳಿಯಲ್ಲಿ ಇಂದು ಅಬ್ಬರದ ಮಳೆಯ ಪ್ರಮಾಣ ಅಲ್ಪ ಇಳಿಕೆಯಾಗಿದ್ದು, ಮಳೆಗಾಲದ ಸರಳ ಮಳೆ ಮುಂದಿವರಿದಿದೆ.
ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಕುಮಾರಧಾರ ನದಿಯಲ್ಲಿನ ಪ್ರವಾಹವು ಕಡಿಮೆಯಾಗಿದೆ.ಶಾಂತಳಾಗಿ ಕುಮಾರಧಾರೆ ಹರಿಯುತ್ತಿದ್ದಾಳೆ.
ಸದ್ಯ ನಿರಿಯ ಪ್ರಮಾಣ ಇಳಿಕೆಯಾದರೂ, ಕುಮಾರಧಾರ ಸ್ನಾನಘಟ್ಟ ಮುಳುಗಿದ ಸ್ಥಿತಿಯಲ್ಲೇ ಇದೆ.ಬುಧವಾರವೂ ಮುಂದುವರೆದಿದೆ.
ಕಳೆದ ಹಲವು ದಿನಗಳ ಮಳೆಯ ಅಬ್ಬರಕ್ಕೆ ಸ್ಣಾನಘಟ್ಟದಲ್ಲಿನ ಶೌಚಾಲಯ, ಡ್ರೆಸ್ಸಿಂಗ್ ಕೊಠಡಿ, ಜಳಕದ ಕಟ್ಟೆ, ಜಲಾವೃತಗೊಂಡಿತ್ತು .
ಆದರೆ ನೀರಿನ ಮಟ್ಟ ಕಡಿಮೆಯಾಗಿದೆ. ಗೃಹರಕ್ಷಕ ಸಿಬ್ಬಂದಿಗಳು ಸ್ನಾನಘಟ್ಟದಲ್ಲಿದ್ದು ರಕ್ಷಣಾಕಾರ್ಯವನ್ನು ಮುಂದುವರೆಸಿದ್ದಾರೆ.
ಅದೇ ರೀತಿ ನೇತ್ರಾವತಿ ನದಿ ನೀರಿನ ಪ್ರಮಾಣವು ಇಳಿಮುಖವಾಗಿದೆ.