ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿರಂತರ ಮಳೆಯಿಂದ ಆಗುಂಬೆ ಘಾಟ್ ರಸ್ತೆಯ ಕೆಲವೆಡೆ ಬಿರುಕುಬಿಟ್ಟ ಕಾರಣ ಭಾರೀ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ 169 ಎ ಯ ಉಡುಪಿ ತೀರ್ಥಹಳ್ಳಿ ಮಾರ್ಗದ ಆಗುಂಬೆ ಘಾಟ್ ನ 6, 7, 11ನೇ ತಿರುವಿನಲ್ಲಿ ಸಣ್ಣ ಬಿರುಕು ಹಾಗೂ ಕುಸಿತ ಕಂಡುಬಂದಿರುವುದರಿಂದ ಜು. 27ರಿಂದ ಸೆ. 15 ರವರೆಗೆ ಘನವಾಹನ ಸಂಚಾರ ನಿಷೇಧಿಸಿ ಉಡುಪಿ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಆದೇಶ ಹೊರಡಿಸಿದ್ದಾರೆ.
ನಾಳೆಯಿಂದ ಘನ ವಾಹನಗಳು ಪರ್ಯಾಯ ರಸ್ತೆಯಾಗಿರುವ ತೀರ್ಥಹಳ್ಳಿ- ಆಗುಂಬೆ- ಶೃಂಗೇರಿ- ಮಾಳಘಾಟ್-ಕಾರ್ಕಳ-ಉಡುಪಿ ರಸ್ತೆಯಾಗಿ, ತೀರ್ಥಹಳ್ಳಿ- ಮಾಸ್ತಿಕಟ್ಟೆ- ಸಿದ್ದಾಪುರ- ಕುಂದಾಪುರ- ಉಡುಪಿ ಮೂಲಕ ಸಂಚರಿಸುವಂತೆ ಸೂಚಿಸಲಾಗಿದೆ.