Sunday, December 21, 2025

ಇನ್ನು ಈರುಳ್ಳಿ ಕತ್ತರಿಸುವಾಗ ಕಣ್ಣೀರಿಡುವ ಪ್ರಮೇಯವೇ ಇಲ್ಲ; ಈ 5 ತಂತ್ರಗಳನ್ನು ಫಾಲೋ ಮಾಡಿ

ಅಡುಗೆಯ ರುಚಿ ಹೆಚ್ಚಿಸುವ ಈರುಳ್ಳಿ, ಕತ್ತರಿಸುವಾಗ ಮಾತ್ರ ನಮ್ಮನ್ನು ಅಳಿಸಿಬಿಡುತ್ತದೆ. ಈರುಳ್ಳಿಯಲ್ಲಿರುವ ಸಲ್ಫರ್ ಸಂಯುಕ್ತಗಳು ಗಾಳಿಯಲ್ಲಿ ಬಿಡುಗಡೆಯಾಗಿ ಕಣ್ಣಿನ ತೇವಾಂಶದೊಂದಿಗೆ ಸೇರುವುದರಿಂದ ಉರಿ ಮತ್ತು ಕಣ್ಣೀರು ಉಂಟಾಗುತ್ತದೆ. ಈ ಕಿರಿಕಿರಿಯಿಂದ ಮುಕ್ತಿ ಪಡೆಯಲು ಈ ಕೆಳಗಿನ ಸುಲಭ ಉಪಾಯಗಳನ್ನು ಅನುಸರಿಸಿ:

ನೀರಿನಲ್ಲಿ ನೆನೆಸಿಡಿ: ಈರುಳ್ಳಿಯ ಸಿಪ್ಪೆ ತೆಗೆದು, ಕತ್ತರಿಸುವ 30 ನಿಮಿಷಗಳ ಮೊದಲು ತಣ್ಣೀರಿನಲ್ಲಿ ಹಾಕಿಡಿ. ಇದರಿಂದ ಈರುಳ್ಳಿಯ ಅನಿಲಗಳು ನೀರಿನೊಂದಿಗೆ ಬೆರೆತು ಗಾಳಿಗೆ ಹರಡುವುದು ಕಡಿಮೆಯಾಗುತ್ತದೆ.

ಕೂಲಿಂಗ್ ಟ್ರಿಕ್ (ಫ್ರಿಡ್ಜ್): ಕತ್ತರಿಸುವ 10-15 ನಿಮಿಷಗಳ ಮೊದಲು ಈರುಳ್ಳಿಯನ್ನು ಫ್ರಿಡ್ಜ್‌ನಲ್ಲಿಡಿ. ಈರುಳ್ಳಿ ತಣ್ಣಗಾದಾಗ ಸಲ್ಫರ್ ಸಂಯುಕ್ತಗಳ ತೀವ್ರತೆ ಕಡಿಮೆಯಾಗಿ, ಕಣ್ಣೀರು ಬರುವುದು ತಪ್ಪುತ್ತದೆ.

ಫ್ಯಾನ್ ಬಳಕೆ: ಈರುಳ್ಳಿ ಹೆಚ್ಚುವಾಗ ಫ್ಯಾನ್ ಆನ್ ಮಾಡಿಕೊಳ್ಳಿ. ಗಾಳಿಯ ಹರಿವು ಕಣ್ಣಿನತ್ತ ಬರುವ ಸಲ್ಫರ್ ಅಂಶಗಳನ್ನು ದೂರ ತಳ್ಳುತ್ತದೆ.

ನಿಂಬೆ ರಸದ ಮ್ಯಾಜಿಕ್: ನೀವು ಬಳಸುವ ಚಾಕುವಿನ ಬ್ಲೇಡ್‌ಗೆ ಸ್ವಲ್ಪ ನಿಂಬೆ ರಸವನ್ನು ಹಚ್ಚಿ ನಂತರ ಈರುಳ್ಳಿ ಕತ್ತರಿಸಿ. ಇದು ಆಮ್ಲೀಯತೆಯನ್ನು ನಿಯಂತ್ರಿಸಿ ಉರಿ ಬರದಂತೆ ನೋಡಿಕೊಳ್ಳುತ್ತದೆ.

ಬಿಸಿ ನೀರಿನ ಹಬೆ: ಕತ್ತರಿಸುವ ಜಾಗದ ಹತ್ತಿರ ಒಂದು ಪಾತ್ರೆಯಲ್ಲಿ ಬಿಸಿ ನೀರನ್ನು ಇಟ್ಟುಕೊಳ್ಳಿ. ಬಿಸಿ ನೀರಿನಿಂದ ಬರುವ ಹಬೆಯು ಈರುಳ್ಳಿಯ ಆಮ್ಲೀಯ ಅನಿಲಗಳನ್ನು ತಟಸ್ಥಗೊಳಿಸುತ್ತದೆ.

error: Content is protected !!